ದೇಶ

ಕಲಾಭವನ್ ಮಣಿ ಸಾವಿಗೆ ಕೀಟನಾಶಕವೇ ಕಾರಣ: ಮರಣೋತ್ತರ ಪರೀಕ್ಷಾ ವರದಿ

Rashmi Kasaragodu
ತ್ರಿಶ್ಶೂರ್: ಮಲಯಾಳಂ ನಟ ಕಲಾಭವನ್ ಮಣಿ ದೇಹದೊಳಗೆ ಕ್ಲೋರ್‌ಫೈರಿಫೋಸ್ ಎಂಬ ಕೀಟನಾಶಕದ ಅಂಶವಿರುವ ವಸ್ತು ಮತ್ತು ಮದ್ಯದ ಮಿಥೇನಲ್ ಸೇರಿಕೊಂಡ ಕಾರಣ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ದೃಢೀಕರಿಸಿದೆ. 
ಮಣಿಗೆ ಕರುಳು ರೋಗವಿದ್ದ ಕಾರಣ ಈ ರಸಾಯನಿಕ ವಸ್ತುಗಳ ಸೇವನೆ ಅವರನ್ನು ಸಾವಿಗೆ ದೂಡಿತ್ತು. ಆದಾಗ್ಯೂ ಕರುಳುರೋಗದಿಂದಲೇ ಮಣಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಣಿ ಅವರು ಚಿಕಿತ್ಸೆಗೊಳಗಾಗಿದ್ದ ಅಮೃತಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ನಡೆಸಿದ ಪರೀಕ್ಷೆಯಲ್ಲಿ ಮಣಿಯ ದೇಹದಲ್ಲಿ ರಾಸಾಯನಿಕ ವಸ್ತುಗಳು ಪತ್ತೆಯಾಗಿಲ್ಲ. ಆದರೆ ಇದನ್ನು ಪತ್ತೆ ಹಚ್ಚಲು ತಜ್ಞರು ಬೇರೊಂದು ಪರೀಕ್ಷೆಯನ್ನು ನಡೆಸಬೇಕಾಗಿದೆ ಎಂದು ಅಮೃತಾ ಲ್ಯಾಬ್ ರಿಪೋರ್ಟ್‌ನಲ್ಲಿ ಹೇಳಲಾಗಿತ್ತು. 
ಮದ್ಯದಲ್ಲಿದ ವಿಷಾಂಶ ಹಾನಿಕಾರಕ ಮಟ್ಟದಲ್ಲಿರಲಿಲ್ಲ. ಆದರೆ ಕೀಟನಾಶಕದ ಅಂಶವೇ ಈತನ ಮರಣಕ್ಕೆ ಕಾರಣವಾಗಿದೆ. ಈ ಕೀಟನಾಶಕ ದೇಹಕ್ಕೆ ಸೇರಿದ್ದು ತರಕಾರಿಗಳ ಸೇವನೆ ಮೂಲಕವೋ ಅಥವಾ ನೇರ ಸೇವನೆಯೋ ಎಂಬುದನ್ನು ರಿಪೋರ್ಟ್‌ನಲ್ಲಿ ಹೇಳಲಾಗಿಲ್ಲ,
ಅದೇ ವೇಳೆ ತರಕಾರಿಗಳ ಮೂಲಕ ದೇಹವನ್ನು ಸೇರುವ ವಿಷಾಂಶಗಳು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗುವ ರೀತಿಯಲ್ಲಿ ಅಂದರೆ ಅಷ್ಟು ಮಟ್ಟದಲ್ಲಿ ರಕ್ತದಲ್ಲಿ ಸೇರುವ ಸಾಧ್ಯತೆಗಳಿಲ್ಲ ಎಂದು ಕೃಷಿ ವಿಶ್ವವಿದ್ಯಾನಿಲಯದ ತಜ್ಞರು ಹೇಳಿದ್ದಾರೆ.
SCROLL FOR NEXT