ದೇಶ

ಶನಿ ಶಿಂಗ್ಣಾಪುರ ದೇಗುಲದ ಬಳಿ ಮಹಿಳೆಯರ ಪ್ರತಿಭಟನೆ 'ನಾಚಿಕೆಗೇಡು': ಸುಬ್ರಮಣಿಯನ್ ಸ್ವಾಮಿ

Manjula VN

ನವದೆಹಲಿ: ಶನಿ ಶಿಂಗ್ಣಾಪುರ ದೇಗುಲದ ಗರ್ಭಗುಡಿಯನ್ನು ಪ್ರವೇಶಿಸಲು ಶನಿವಾರ ಮಹಿಳೆಯರು ನಡೆಸಿರುವ ಪ್ರತಿಭಟನೆ ನಾಚಿಕೆಗೇಡಿತನವಾಗಿದ್ದು, ಇದರಲ್ಲಿ ಪ್ರಜಾಸತ್ತೀಯತೆ ಎಂಬುದಿಲ್ಲ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಭಾನುವಾರ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಶನಿ ಶಿಂಗ್ಣಾಪುರ ದೇಗುಲ ಹಳೆಯ ಸಂಪ್ರದಾಯವನ್ನು ಆಚರಿಸುತ್ತಿದೆ. ದೇಗುಲದೊಳಗೆ ಪುರುಷಗಿರುವಂತೆಯೇ ಮಹಿಳೆಯರಿಗೆ ಪ್ರವೇಶ ನೀಡುವುದರ ಕುರಿತಂತೆ ನಾವು ಬೆಂಬಲ ನೀಡುತ್ತೇವೆ. ಆದರೆ, ಮಹಿಳೆಯರು ನಿನ್ನೆ ನಡೆದುಕೊಂಡ ರೀತಿಯ ಪ್ರಚೋಜನೆ ನೀಡುವಂತಿತ್ತು. ಪ್ರತಿಭಟನೆ ನಡೆಸಿದವರು ಪ್ರಜಾಪ್ರಭುತ್ವದ ಪ್ರತಿಭಟನೆಕಾರರಂತಿರಲಿಲ್ಲ. ಯಾವುದೋ ಅಜೆಂಡಾ ಇಟ್ಟುಕೊಂಡು ಬಂದಂತಿತ್ತು ಎಂದು ಹೇಳಿದ್ದಾರೆ.

ಪ್ರತಿಭಟನೆ ನಡೆಸುವುದಕ್ಕೂ ಒಂದು ಪದ್ಧತಿಯಿದೆ. ದೇಗುಲ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದೇ ಆದರೆ, ಸಮಾಧಾನದಿಂದ ಹಿಂದಕ್ಕೆ ಹೋಗಿ ಮುಖ್ಯಮಂತ್ರಿಯವರನ್ನು ಭೇಟಿಯಾಗಬೇಕಿತ್ತು. ನ್ಯಾಯಾಲಯದ ತೀರ್ಪು ನೀಡಿದೆ. ಆದರೂ ನಮಗೆ ವಿರೋಧ ವ್ಯಕ್ತಪಡಿಸುತ್ತಿದೆ. ಕ್ರಮ ಕೈಗೊಳ್ಳುವಂತೆ ಮನವಿ ಮಾಡಬೇಕಿತ್ತು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಹೇಳಬೇಕಿತ್ತು. ಅದನ್ನು ಬಿಟ್ಟುಕ ತಳ್ಳಾಟ, ನೂಕಾಟ ಮಾಡಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ಇದು ನಿಜಕ್ಕೂ ನಾಚಿಕೆಗೇಡಿತನದ ಕೆಲಸ ಎಂದಿದ್ದಾರೆ.

SCROLL FOR NEXT