ಚಂಡೀಗಢ: ಜಮ್ಮು ಕಾಶ್ಮೀರದಲ್ಲಿ ಮುಂದಿನ 24 ಗಂಟೆಗಳಲ್ಲಿ ಹಿಮಪಾತವಾಗುವ ಸಾಧ್ಯತೆಯಿದ್ದು ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.
3,500 ಮೀಟರ್ ಎತ್ತರದಲ್ಲಿರುವ ಗಂಡೇರ್‌ಬಲ್ ಮತ್ತು ಕಾರ್ಗಿಲ್ ಜಿಲ್ಲೆಯ ಹಿಮಪಾತ ಸಂಭಾವ್ಯ ಪ್ರದೇಶದಲ್ಲಿರುವ ಜನರು ಜಾಗರೂಕರಾಗಿರಬೇಕೆಂದು ಚಂಡೀಗಢ ಮೂಲದ ಹಿಮ ಮತ್ತು ಹಿಮಪಾತ ಅಧ್ಯಯನ ಕೇಂದ್ರ (ಎಸ್‌ಎಎಸ್‌ಇ) ಎಚ್ಚರಿಕೆ ನೀಡಿದೆ.
ಡ್ರಾಸ್‌ನಲ್ಲಿ ಈಗಾಗಲೇ 5 ಸೆಮಿ ಹಿಮಮಳೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ ಬಿನಹಾಲ್‌ನಲ್ಲಿ 16 ಮಿ.ಮೀ, ಗುಲ್ಮಾರ್ಗ್‌ನಲ್ಲಿ 28 ಮಿಮಿ ಮತ್ತು ಫರಿಕಿಯಾನ್ ನಲ್ಲಿ 34 ಮಿಮಿ ಮಳೆಯಾಗಿದೆ ಎಂದು ಎಸ್‌ಎಎಸ್‌ಇ ಹೇಳಿದೆ.