ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಎನ್ ಐಎ ಅಧಿಕಾರಿ 
ದೇಶ

ಎನ್ ಐಎ ಅಧಿಕಾರಿ ಹತ್ಯೆ ಪ್ರಕರಣ: ರು.1 ಕೋಟಿ ಪರಿಹಾರ ಘೋಷಿಸಿದ ದೆಹಲಿ ಸರ್ಕಾರ

ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಎನ್ ಐಎ ಅಧಿಕಾರಿ ಕುಟುಂಬಕ್ಕೆ ದೆಹಲಿ ಸರ್ಕಾರ ಸೋಮವಾರ ರು.1 ಕೋಟಿ ಪರಿಹಾರ ಧನವನ್ನು ಘೋಷಿಸಿದೆ...

ನವದೆಹಲಿ: ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಎನ್ ಐಎ ಅಧಿಕಾರಿ ಕುಟುಂಬಕ್ಕೆ ದೆಹಲಿ ಸರ್ಕಾರ ಸೋಮವಾರ ರು.1 ಕೋಟಿ ಪರಿಹಾರ ಧನವನ್ನು ಘೋಷಿಸಿದೆ.

ಪಠಾಣ್ ಕೋಟ್ ವಾಯುನೆಲೆ ಉಗ್ರರ ದಾಳಿ ಪ್ರಕರಣದ ತನಿಖಾ ತಂಡದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ಎನ್ ಐಎ ಅಧಿಕಾರಿ ಮೊಹಮ್ಮದ್ ತಾಂಝೀಲ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮದುವೆ ಸಮಾರಂಭಕ್ಕೆ ಹೋಗಿ ಹಿಂತಿರುಗು ಬರುತ್ತಿದ್ದರು ಈ ವೇಳೆ ಬಿಜ್ನೋರ್ ಜಿಲ್ಲೆಯಲ್ಲಿರುವ ಸಾಹಸ್ಪುರ ಗ್ರಾಮದ ಬಳಿ ಬರುತ್ತಿದ್ದಂತೆ ಮುಸುಧಾರಿಗಳಾಗಿ ಬಂಧೂಕು ಹಿಡಿದು ಬಂದಿರುವ ದುಷ್ಕರ್ಮಿಗಳು ಏಕಾಏಕಿ ಅಧಿಕಾರಿಯ ಮೇಲೆ ಗುಂಡಿನ ಮಳೆಸುರಿಸಿದ್ದಾರೆ.

ಘಟನೆ ವೇಳೆ 24 ಗುಂಡುಗಳು ಅಧಿಕಾರಿಯ ದೇಹದೊಳಗೆ ಹೊಕ್ಕಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಅಧಿಕಾರಿಯ ಪತ್ನಿಗೂ ಗುಂಡು ಬಿದ್ದಿದ್ದು, ಇದೀಗ ಆಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ. ಕಾರಿನ ಹಿಂಬದಿ ಸೀಟಿನಲ್ಲಿ ಮಕ್ಕಳು ಕುಳಿತಿದ್ದ ಕಾರಣ ಮಕ್ಕಳಿಗೆ ಯಾವುದೇ ಗಾಯಗಳಾಗಿಲ್ಲ.

ಇದೀಗ ಪ್ರಕರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಧಿಕಾರಿಯ ಕುಟುಂಬಸ್ಥರಿಗೆ ಪರಿಹಾರ ಧನವನ್ನು ಘೋಷಿಸಿದ್ದು, ರು.1 ಕೋಟಿ ಧನವನ್ನು ನೀಡುವುದಾಗಿ ತಿಳಿಸಿದ್ದಾರೆ.

ದೆಹಲಿ ಸರ್ಕಾರ ಪರಿಹಾರ ಘೋಷಿಸಿರುವುದಕ್ಕೆ ಸಂಸತ ವ್ಯಕ್ತಪಡಿಸಿರುವ ದೆಹಲಿ ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ ಅವರು ಕೇಜ್ರಿವಾಲ್ ಅವರು ಅಧಿಕಾರಿಯ ಕುಟುಂಬಸ್ಥರಿಗೆ ರು. 1 ಕೋಟಿ ಪರಿಹಾರ ಧನ ಘೋಷಿಸಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಘಟನೆ ತೀರಾ ಗಂಭೀರವಾಗಿದ್ದು, ತನಿಖಾ ತಂಡ ದಾಖಲೆಗಳನ್ನು ಕಲೆ ಹಾಕುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂದು ದೆಹಲಿಯಲ್ಲಿ ಚುನಾವಣೆ ನಡೆಸಿ... BJP 10 ಸ್ಥಾನ ಗೆದ್ದರೆ ನಾನು ರಾಜಕೀಯ ತ್ಯಜಿಸುತ್ತೇನೆ: ಕೇಜ್ರಿವಾಲ್ ಸವಾಲು

ಹುಬ್ಬಳ್ಳಿ: ಕರ್ನಾಟಕದ ವಿರುದ್ಧ ಗೆದ್ದು ಚೊಚ್ಚಲ Ranji Trophy ತೆಗೆದುಕೊಂಡು ಹೋಗ್ತೀವಿ - ಜಮ್ಮು-ಕಾಶ್ಮೀರ ಸಿಎಂ

T20 World Cup 2026: ಇಂಗ್ಲೆಂಡ್ ವಿರುದ್ಧ ಗೆಲ್ಲುವ ಪಂದ್ಯ ಕೈಚೆಲ್ಲಿದ ಕಿವೀಸ್, ಪಾಕ್ ಸೆಮಿಸ್ ಕನಸು ಜೀವಂತ!

Ranji Final: ಚೊಚ್ಚಲ ಪ್ರಶಸ್ತಿ ಗೆಲುವಿನ ಸನಿಹದಲ್ಲಿ ಜಮ್ಮು-ಕಾಶ್ಮೀರ; ತವರಿನಲ್ಲೇ ಕರ್ನಾಟಕಕ್ಕೆ ದೊಡ್ಡ ಹಿನ್ನಡೆ!

ಈ ರಸ್ತೆ ಮುಸ್ಲಿಮರಿಗಲ್ಲ: ಡೆಹ್ರಾಡೂನ್-ದೆಹಲಿ ಎಕ್ಸ್‌ಪ್ರೆಸ್‌ವೇಯಲ್ಲಿ ಯುವತಿಯರು ಬರೆಯುತ್ತಿರುವ ವಿಡಿಯೋ ವೈರಲ್!

SCROLL FOR NEXT