ಅಸ್ಸಾಂ ಬಿಜೆಪಿ ಕಚೇರಿ ಎದುರು ಬಾಂಬ್ ಸ್ಫೋಟ: 1 ಸಾವು, 20 ಗಾಯ 
ದೇಶ

ಅಸ್ಸಾಂ ಬಿಜೆಪಿ ಕಚೇರಿ ಎದುರು ಬಾಂಬ್ ಸ್ಫೋಟ: 1 ಸಾವು, 20 ಗಾಯ

ಅಸ್ಸಾಂನ ತಾತ್ಕಾಲಿಕ ಬಿಜೆಪಿ ಚುನಾವಣಾ ಕಚೇರಿ ಎದುರು ಬಾಂಬ್ ಸ್ಫೋಟಗೊಂಡಿದ್ದು, ಪರಿಣಾಮ ಓರ್ವ ಸಾವನ್ನಪ್ಪಿ ನಾಲ್ವುರು ಪೊಲೀಸರು ಸೇರಿ 20 ಮಂದಿ ಗಾಯಗೊಂಡಿರುವ...

ಗುವಾಹಟಿ: ಅಸ್ಸಾಂನ ತಾತ್ಕಾಲಿಕ ಬಿಜೆಪಿ ಚುನಾವಣಾ ಕಚೇರಿ ಎದುರು ಬಾಂಬ್ ಸ್ಫೋಟಗೊಂಡಿದ್ದು, ಪರಿಣಾಮ ಓರ್ವ ಸಾವನ್ನಪ್ಪಿ ನಾಲ್ವುರು ಪೊಲೀಸರು ಸೇರಿ 20 ಮಂದಿ ಗಾಯಗೊಂಡಿರುವ ಘಟನೆ ಗೋಲ್ಪರ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಶಂಕಿತ ಉಗ್ರರು ಬಿಜೆಪಿ ಕಚೇರಿ ಎದುರು ಬ್ಯಾಗ್ ವೊಂದನ್ನು ಇಟ್ಟು ಹೋಗಿದ್ದಾನೆ. ಇದರಂತೆ ಸಂಜೆ 7.30ರ ಸುಮಾರಿಗೆ ಬಾಂಬ್ ಸ್ಫೋಟಗೊಂಡಿದೆ. ಘಟನೆ ವೇಳೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಸ್ಥಳದಲ್ಲಿದ್ದ 4 ಪೊಲೀಸರು ಸೇರಿದಂತೆ 20 ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ವೇಳೆ ಸಾವನ್ನಪ್ಪಿದ್ದ ವ್ಯಕ್ತಿಯನ್ನು ಬಪೊನ್ ಸಹ ಎಂದು ಗುರ್ತಿಸಲಾಗಿದೆ.

ಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ಸ್ಥಳದಲ್ಲಿ ಸಾಕಷ್ಟು ಭೀತಿಕರ ವಾತಾವರಣ ಉಂಟಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ತೊಡಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಫೋಟಗೊಂಡ ಸ್ಥಳದಲ್ಲಿದ್ದ ಎರಡು ಅಂಗಡಿಗಳು ಸಂಪೂರ್ಣವಾಗಿ ನಾಶಗೊಂಡಿದೆ.

ಅಸ್ಸಾಂನಲ್ಲಿ ನಿನ್ನೆ ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆದಿತ್ತು. 125 ಕ್ಷೇತ್ರಗಳ ಪೈಕಿ 65 ಕ್ಷೇತ್ರಗಳಿಗೆ ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿತ್ತು. ಚುನಾವಣೆ ಪ್ರಕ್ರಿಯೆ ನಡೆದು ಕೇವಲ 1 ಗಂಟೆಯಷ್ಟರಲ್ಲೇ ಬಾಂಬ್ ಸ್ಫೋಟಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯದಲ್ಲಿ ಬಿಗ್​ ಟ್ವಿಸ್ಟ್: TVK ಬೆಂಬಲಿಸಲು ಕಾಂಗ್ರೆಸ್ ನಿರ್ಧಾರ; DMK ಮೈತ್ರಿಗೆ ಭಾರಿ ಶಾಕ್, ಹೊಸ ಮೈತ್ರಿ ಸರ್ಕಾರ ಅಧಿಕಾರಕ್ಕೆ..!

TVK–ಕಾಂಗ್ರೆಸ್ ಮೈತ್ರಿ: ಸಂಪುಟದಲ್ಲಿ 2 ಸ್ಥಾನಕ್ಕೆ 'ಕೈ' ಬೇಡಿಕೆ, ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚನೆ ಬಹುತೇಕ ಖಚಿತ..!

TVK ಬೆಂಬಲ ವಿಷಯವಾಗಿ ಮೈತ್ರಿಯಲ್ಲಿ ಬಿರುಕು: DMK ಬೆನ್ನಿಗೆ ಕಾಂಗ್ರೆಸ್ ಚೂರಿ? AIADMKಯಲ್ಲೂ ಭುಗಿಲೆದ್ದ ಅಸಮಾಧಾನ!

ಸಿಎಂ ಹುದ್ದೆ ತ್ಯಾಗಕ್ಕೆ ಸಿದ್ದರಾಮಯ್ಯ ಸಿದ್ದ: ಹೈಕಮಾಂಡ್ ಆದೇಶಕ್ಕೆ ಪರಮೇಶ್ವರ್ ಬದ್ಧ; ಮುಖ್ಯಮಂತ್ರಿ ಸ್ಥಾನ ಒಲ್ಲೆ ಎಂದಿದ್ದೇಕೆ ಖರ್ಗೆ?

ಸೋಲು ಬಳಿಕವೂ ಹಠಕ್ಕೆ ಬಿದ್ದ ಮಮತಾ ಬ್ಯಾನರ್ಜಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಕಾರ, ಒದ್ದು ಹೊರಹಾಕಿ ಎಂದು ಜೇಠ್ಮಲಾನಿ ಕಿಡಿ

SCROLL FOR NEXT