ದೇಶ

ಉದ್ಯೋಗ ಸೃಷ್ಟಿಸುವುದು ಸ್ಟಾಂಡ್ ಅಪ್ ಇಂಡಿಯಾದ ಉದ್ದೇಶ: ನರೇಂದ್ರ ಮೋದಿ

Sumana Upadhyaya

ಮುಂಬೈ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ 'ಸ್ಟಾಂಡ್ ಅಪ್ ಇಂಡಿಯಾ'ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಉತ್ತರ ಪ್ರದೇಶದ ನೋಯ್ಡಾದಲ್ಲಿ ಚಾಲನೆ ನೀಡಿದರು. ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮುದಾಯಗಳ ಉದ್ಯಮಶೀಲರನ್ನು ಉತ್ತೇಜಿಸುವ ಯೋಜನೆ ಇದಾಗಿದೆ.

ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನ್ಯಾಕ್, ಕೇಂದ್ರ ಹಣಕಾಸು ಮತ್ತು ಸಂಸ್ಕೃತಿ ಸಚಿವ ಅರುಣ್ ಜೇಟ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರಧಾನಿ ಮಾತನಾಡಿ, ಬಾಬು ಜಗಜೀವನ್ ರಾಂ ಅವರಿಗೆ ಗೌರವ ನಮನ ಸಲ್ಲಿಸಿದರು. ದಲಿತರಿಗೆ ಮತ್ತು ಬಡ ಜನರ ಉದ್ಧಾರಕ್ಕಾಗಿ ಸ್ಟಾಂಡ್ ಅಪ್ ಇಂಡಿಯಾ ಬಗ್ಗೆ ತಮಗೆ ನಿರ್ದಿಷ್ಟ ದೃಷ್ಟಿಕೋನವಿದೆ ಎಂದರು.ಸ್ಟಾಂಡ್ ಅಪ್ ಇಂಡಿಯಾ ಮೂಲಕ ಉದ್ಯೋಗ ಹುಡುಕುವವರನ್ನು ಉದ್ಯೋಗ ಸೃಷ್ಟಿಸುವವರನ್ನಾಗಿ ಬದಲಾಯಿಸುವ ಉದ್ದೇಶ ನಮ್ಮದು ಎಂದರು.

ಇದೇ ಸಂದರ್ಭದಲ್ಲಿ ಅವರು 5 ಸಾವಿರದ 100 ಇ-ರಿಕ್ಷಾಗಳನ್ನು ಮುದ್ರಾ ಯೋಜನೆಯಡಿ ಬಿಡುಗಡೆ ಮಾಡಿ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಿದರು. ನೊಯ್ಡಾದಲ್ಲಿ ಕೌಶಲ ವಿಕಾಸ ಕೇಂದ್ರವನ್ನು ಉದ್ಘಾಟಿಸಿದರು.

ದಲಿತರಿಗೆ, ಪರಿಶಿಷ್ಟ ಜಾತಿ, ವರ್ಗದವರಿಗೆ, ಮಹಿಳೆಯರಿಗೆ ಬ್ಯಾಂಕಿನಿಂದ ಸಾಲ ದೊರೆಯುವಂತೆ ಮಾಡಿ ಉದ್ಯಮಶೀಲತೆ ಗುಣವನ್ನು ಬೆಳೆಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ನ್ಯಾಷನಲ್ ಬ್ಯಾಂಕ್(ನಬಾರ್ಡ್) ಮತ್ತು ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್, ದಲಿತ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆ ಚೇಂಬರ್ ಮಹಿಳೆಯರು,ಎಸ್ಸಿ, ಎಸ್ಟಿ ವರ್ಗದವರಿಗೆ ಉದ್ಯಮ ಆರಂಭಕ್ಕೆ 10 ಲಕ್ಷದಿಂದ 1 ಕೋಟಿಯವರೆಗೆ ಧನ ಸಹಾಯ ಒದಗಿಸಲಿವೆ.

SCROLL FOR NEXT