ಇಸಿಸ್ ನಂಟು: ಬಂಧಿತ ಶಂಕಿತ ಉಗ್ರ ಭಟ್ಕಳದವನು!
ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ(ಇಸಿಸ್) ಉಗ್ರ ಸಂಘಟನೆಗೆ ಸೇರಲು ಸಿರಿಯಾಗೆ ಪ್ರಯಾಣ ಬೆಳೆಸಿದ್ದ ಕರ್ನಾಟಕದ ಭಟ್ಕಳ ಮೂಲದ ಶಂಕಿತ ಉಗ್ರನನ್ನು...
ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ(ಇಸಿಸ್) ಉಗ್ರ ಸಂಘಟನೆಗೆ ಸೇರಲು ಸಿರಿಯಾಗೆ ಪ್ರಯಾಣ ಬೆಳೆಸಿದ್ದ ಉಗ್ರನನ್ನು ಪುಣೆ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಬಂಧಿತ ಉಗ್ರ ಕರ್ನಾಟಕದ ಭಟ್ಕಳ ಮೂಲದವನು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಪುಣೆಯಿಂದ ದುಬೈ ಮೂಲಕ ಸಿರಿಯಾಗೆ ಪ್ರಯಾಣ ಬೆಳೆಸಿದ್ದ ಭಟ್ಕಳ ಮೂಲದ ಇಸ್ಮಾಯಿಲ್ ಮಸೂದ್ ಅಬ್ದುಲ್ ರಾವೂಫ್ ಅಲಿಯಾಸ್ ರಾವೂಫ್ ಅಹಮ್ಮದ್ ಎಂದು ತಿಳಿದುಬಂದಿದ್ದು, ರಾವೂಫ್ ಇಸಿಸ್ ಉಗ್ರ ಸಂಘಟನೆ ಸೇರುವ ಖಚಿತ ಮಾಹಿತಿಯ ಪಡೆದ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದರು.
ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯನಾಗಿದ್ದ ರಾವೂಫ್ ಇಸಿಸ್ ಸಂಘಟನೆಯೊಂದಿಗೆ ಸಂಪರ್ಕ ಸಾಧಿಸಿ, ಸಂಘಟನೆ ಸೇರಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದ ಎನ್ನಲಾಗಿದೆ. ಅಲ್ಲದೆ ಸಿರಿಯಾ ಮತ್ತು ಇರಾಕ್ಗಳಲ್ಲಿ ಸಾಕಷ್ಟು ಚುರುಕಾಗಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪದನೆ ಸಂಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡಿದ್ದ ಎಂಬುದು ವಿಚಾರಣೆ ವೇಳೆ ಬಹಿರಂಗವಾಗಿದೆ.
ಭಟ್ಕಳದ ನಾವಾಯತ್ ಕಾಲೋನಿಯ ನಿವಾಸಿಯಾಗಿರುವ ವಿಚಾರ ಸಂಗ್ರಹಿಸಿದ ಪೊಲೀಸರು ರಾವೂಫ್ ನ ಮನೆಗೆ ಭೇಟಿ ನೀಡಿ ಪೋಷಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.