ಜೈಪುರ್: ಇಲ್ಲಿನ ನಹರ್ಗಢ್ ಕೋಟೆಯಲ್ಲಿ ಮೇಣದ ಮ್ಯೂಸಿಯಂ ಆರಂಭಿಸಲು ಸಿದ್ಧತೆ ನಡೆಯುತ್ತಿದೆ.
ಜೈಪುರ್ ಮೇಣದ ಮ್ಯೂಸಿಯಂ ಎಂದು ಹೆಸರಿಡಲಾಗಿರುವ ಈ ಮ್ಯೂಸಿಯಂನಲ್ಲಿ ದೇಶ ಮತ್ತು ವಿದೇಶಗಳ ಮಹಾನ್ ವ್ಯಕ್ತಿಗಳ ಮೇಣದ ಪ್ರತಿಮೆಗಳು, ಬಾಲಿವುಡ್, ಹಾಲಿವುಡ್, ಕ್ರೀಡಾ, ಸಂಗೀತ ಮತ್ತು ಸಾಹಿತ್ಯದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಮೇಣದ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು.
ಅತುಲ್ಯವಾಗಿರುವ ಮೇಣದ ಪ್ರತಿಮೆಗಳನ್ನು ಇಲ್ಲಿ ಸ್ಥಾಪಿಸುವ ಮೂಲಕ ಅಲ್ಲೊಂದು ವಿಶಿಷ್ಟ ವಾತಾವರಣವನ್ನೇ ಸೃಷ್ಟಿಸಲಾಗುವುದು ಎಂದು ಬಲ್ಲಮೂಲಗಳು ಹೇಳಿವೆ.