ದೇಶ

ಉರುಸ್ ಆಚರಣೆಗೆ ರಾಷ್ಟ್ರೀಯ ರಜೆ ಘೋಷಣೆ ಮಾಡಿ: ಪ್ರಧಾನಿಗೆ ಸೂಫಿ ಸಮಿತಿಯ ಪತ್ರ

Srinivas Rao BV

ಅಜ್ಮೀರ್: ಅಜ್ಮೀರ್ ದರ್ಗಾಗೆ ಭೇಟಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿರುವ ಸೂಫಿ ಸಮಿತಿ, ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ಉರುಸ್ ಕಾರ್ಯಕ್ರಮದ ದಿನದಂದು ರಾಷ್ಟ್ರೀಯ ರಜೆ ಘೋಷಿಸಬೇಕೆಂದು ಮನವಿ ಮಾಡಿದೆ.

ದರ್ಗಾ ಸಮಿತಿಯ ಅಧ್ಯಕ್ಷ ಅಸರ್ ಅಹ್ಮದ್ ಖಾನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಏ.9 ರಂದು ಅಜ್ಮೀರ್ ದರ್ಗಾದಲ್ಲಿ ಪ್ರಾರಂಭವಾಗಲಿರುವ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದು, ಉರುಸ್ ಆಚರಣೆಯಂದು ರಾಷ್ಟ್ರೀಯ ರಜೆ ಘೋಷಿಸಬೇಕೆಂದು ಮನವಿ ಮಾಡಿದ್ದಾರೆ.
ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ವಾರ್ಷಿಕ ಉರುಸ್ ಕಾರ್ಯಕ್ರಮದ ಅಂಗವಾಗಿ 1989 ಹಾಗೂ 2012 ರಲ್ಲಿ ಭಾರತ ಸರ್ಕಾರ ಅಂಚೆಚೀಟಿ (ಪೋಸ್ಟಲ್ ಸ್ಟಾಂಪ್) ನ್ನು ಬಿಡುಗಡೆ ಮಾಡಿದೆ. ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರಿಗೆ ಗೌರವ ಸೂಚಿಸಲು ದೇಶದ ಹಿಂದಿನ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಹಾಗೂ ಅನೇಕ ಗಣ್ಯರು ಅಜ್ಮೀರ್ ದರ್ಗಾಗೆ ಭೇಟಿ ನೀಡಿದ್ದಾರೆ ಎಂದು ಅಸರ್ ಅಹ್ಮದ್ ಖಾನ್ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.  ಈ ಎಲ್ಲಾ ಅಂಶಗಳನ್ನು ಪರಿಗಣಿಸಿ  ಉರುಸ್ ಆಚರಣೆಯ ದಿನದಂದು ರಾಷ್ಟ್ರೀಯ ರಜೆ ಘೋಷಣೆ ಮಾಡಬೇಕೆಂದು ಅಸರ್ ಅಹ್ಮದ್ ಖಾನ್ ಆಗ್ರಹಿಸಿದ್ದಾರೆ.

SCROLL FOR NEXT