ನರೇಂದ್ರ ಮೋದಿ 
ದೇಶ

ಭಾರತದ ಮಧ್ಯಮ ವರ್ಗದವರಿಗೆ ಮೋದಿಯೇ ಜನಪ್ರಿಯ: ಸಮೀಕ್ಷಾ ವರದಿ

ಭಾರತದ ಮಧ್ಯಮ ವರ್ಗದ ಜನರಲ್ಲಿ ಪ್ರಧಾನಿ ಮೋದಿಯೇ ಜನಪ್ರಿಯರಾಗಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. ಈ ಸಮೀಕ್ಷೆಯಲ್ಲಿ ಮೋದಿ...

ನವದೆಹಲಿ: ಭಾರತದ ಮಧ್ಯಮ ವರ್ಗದ ಜನರಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಜನಪ್ರಿಯರಾಗಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. ಈ ಸಮೀಕ್ಷೆಯಲ್ಲಿ ಮೋದಿ ನೇತೃತ್ವದ ಎನ್‌ಡಿಎ ಆಡಳಿತದ ಕಾರ್ಯವೈಖರಿಯ ಬಗ್ಗೆ ವಿಶ್ಲೇಷಣೆ ಮಾಡಿ ಅದಕ್ಕೆ ಅಂಕವನ್ನೂ ನೀಡಲಾಗಿದೆ.
ಆರ್ಥಿಕ ಸುಧಾರಣೆ 
ಇಟಿ ಟಿಎನ್‌ಎಸ್ ಸಮೀಕ್ಷೆಯ ಪ್ರಕಾರ ಭಾರತದ ಆರ್ಥಿಕ ಸಾಮರ್ಥ್ಯ ಶೇ.8.6 ರಷ್ಟು ಇದೆ.
ಉದ್ಯೋಗ ಸೃಷ್ಟಿ 
ಮೋದಿ ಸರ್ಕಾರವು  ಶೇ.62 ರಷ್ಟು ಉದ್ಯೋಗ ಸೃಷ್ಟಿಸಿದೆ
ಮುಂದೆ ಅಚ್ಛೇ ದಿನ ಬರಲಿದೆ 
ಸಮೀಕ್ಷೆಯ ಪ್ರಕಾರ ಶೇ.58ರಷ್ಟು ಮಂದಿ ಅಚ್ಛೇದಿನ್‌ನಲ್ಲಿ ನಂಬಿಕೆಯಿರಿಸಿದ್ದು, ಭವಿಷ್ಯದಲ್ಲಿ ಒಳ್ಳೆಯ ದಿನ ಬರಲಿದೆ ಎಂಬ ಆಶಾವಾದವನ್ನಿಟ್ಟುಕೊಂಡಿದ್ದಾರೆ. 
ಜೆಎನ್‌ಯು ವಿವಾದ: ಕಾಂಗ್ರೆಸ್ ಹೊಣೆ
 ಜೆಎನ್‌ಯು ವಿವಾದಕ್ಕೆ  ಕಾಂಗ್ರೆಸ್ಸೇ ಹೊಣೆ  ಎಂದು ಶೇ.46 ರಷ್ಟು ಜನ ಅಭಿಪ್ರಾಯ ಪಟ್ಟಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಅದೇ ವೇಳೆ ಈ ವಿವಾದಕ್ಕೆ ತಕ್ಕ ಕ್ರಮ ತೆಗೆದುಕೊಂಡು ಮೋದಿ ಸರ್ಕಾರ ಇದನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ಶೇ.52 ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ಮೋದಿಯೇ ಜನಪ್ರಿಯ ನಾಯಕ
ಸಮೀಕ್ಷೆಯ ಪ್ರಕಾರ ಪ್ರಧಾನಿ ಮೋದಿಯೇ ಜನಪ್ರಿಯ ನಾಯಕರಾಗಿದ್ದಾರೆ. ಜನಪ್ರಿಯತೆಗೆ ನೀಡುವ 10 ಅಂಕಗಳಲ್ಲಿ 7.68 ಅಂಕ ಪಡೆದು ಮೋದಿ ಮೊದಲ ಸ್ಥಾನದಲ್ಲಿದ್ದರೆ ರಾಹುಲ್ ಗಾಂಧಿಗೆ 3.61 ಅಂಕ ಲಭಿಸಿದೆ. ಅದೇ ವೇಳೆ ಅರುಣ್ ಜೇಟ್ಲಿಗೆ 5.86 ಅಂಕಗಳು ಲಭಿಸಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು, ಬಿಹಾರದಲ್ಲಿ ರೋಚಕ Video ವೈರಲ್‌

ಬಂಡೀಪುರದಲ್ಲಿ ದಂತವಿಲ್ಲದ ಆನೆಯ ಕಳೇಬರ ಪತ್ತೆ; ನಟೋರಿಯಸ್ ಬವಾರಿಯಾ ಗ್ಯಾಂಗ್‌ ನಂಟಿನ ಶಂಕೆ