ನವದೆಹಲಿ: ಜಮ್ಮು ಕಾಶ್ಮೀರದ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿರುವ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ, ಸುಮಾರು 150 ವಿದ್ಯಾರ್ಥಿಗಳು ದೆಹಲಿಯಿಂದ ಶ್ರೀನಗರಕ್ಕೆ ಯಾತ್ರೆ ನಡೆಸುತ್ತಿದ್ದಾರೆ
12 ರಾಜ್ಯಗಳ ಸುಮಾರು 150 ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು 'ಚಲೋ ಎನ್‌ಐಟಿ' ಎಂಬ ಹೆಸರಿನ ಯಾತ್ರೆಯನ್ನು ಶನಿಮಾರ ಕೈಗೊಂಡಿದ್ದಾರೆ. ಬೈಕ್, ಕಾರು ಮತ್ತು ಬಸ್‌ಗಳಲ್ಲಿ ದೆಹಲಿಯಿಂದ ಶ್ರೀನಗರದವರೆಗಿರುವ ಯಾತ್ರೆಯಾಗಿದೆ ಇದು.
ಆದಾಗ್ಯೂ, ಎನ್‌ಐಟಿ ಶ್ರೀನಗರದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.