ಕೊಲ್ಲಂ: ಭಾನುವಾರ ಮುಂಜಾನೆ ಇಲ್ಲಿನ ಪರವೂರ್ ಪುಟ್ಟಿಂಗಲ್ ದೇವಾಲಯದಲ್ಲಿ ಸಂಭವಿಸಿದ ಅತೀ ದೊಡ್ಡ ಪಟಾಕಿ ದುರಂತವಾಗಿದೆ. ಈ ಹಿಂದೆ 1952ರಲ್ಲಿ ಶಬರಿಮಲೆಯಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ 68 ಮಂದಿ ಸಾವಿಗೀಡಾಗಿದ್ದರು.
ಕೇರಳದಲ್ಲಿ ಸಂಭವಿಸಿದ ಪಟಾಕಿ ದುರಂತಗಳು
1952 ಜನವರಿ : ಶಬರಿಮಲೆಯಲ್ಲಿ ಜನವರಿ 14 ರಂದು ಮುಂಜಾನೆ ಸಂಭವಿಸಿದ ಪಟಾಕಿ ದುರಂತದಲ್ಲಿ 68 ಮಂದಿ ಮರಣ
1978: ತ್ರಿಶ್ಶೂರ್ ಪೂರಂನಲ್ಲಿ ನಡೆದ ಪಟಾಕಿ ದುರಂತದಲ್ಲಿ ಎಂಟು ಸಾವು
1984: ತ್ರಿಶ್ಶೂರ್ ಕಡಂಶಂಕಡವ್ ಚರ್ಚ್ ಜಾಕ್ರೆಯಲ್ಲಿ ಪಟಾಕಿ ದುರಂತ 20 ಸಾವು
1987: ತ್ರಿಶ್ಶೂರ್ ವೇಲೂರಿನ ವೆಳ್ಳಾಟ್ಟಂಚೂರ್- ಕುಟ್ಟನ್ಮೂಲಿ ದೇಗುಲದಲ್ಲಿ ದುರಂತ 20 ಸಾವು
1987: ತಲಶ್ಶೇರಿ ಜಗನ್ನಾಥ ದೇವಾಲಾಯದದ ಬೆಡಿ ಮಹೋತ್ಸವ ನೋಡಲು ರೈಲು ಹಳಿಯಲ್ಲಿ ಕುಳಿತವರ ಮೇಲೆ ರೈಲು ಹರಿದು 27 ಸಾವು
1988 :ತ್ರಿಪ್ಪೂಣಿತ್ತುರ ಪಟಾಕಿ ಸಂಗ್ರಹಶಾಲೆಗೆ ಬೆಂಕಿ 10 ಸಾವು
1989 :ತ್ರಿಶ್ಶೂರ್ ಕಂಡಶ್ಶಂಕಡವ್ ಚರ್ಚ್‌ನಲ್ಲಿ ಪಟಾಕಿ ದುರಂತ 12 ಸಾವು
1990: ಕೊಲ್ಲಂ ಮಲನಡದ ಪೊರುವಿರುತ್ತಿ ದೇಗುಲದ ಪಟಾಕಿ ಶೆಡ್‌ನಲ್ಲಿ ಪಟಾಕಿ ದುರಂತ 26 ಸಾವು
1997: ಚಿಯ್ಯಾರಂ ಪಟಾಕಿ ಕಾರ್ಖಾನೆಯಲ್ಲಿ ದುರಂತ 6 ಸಾವು
1998: ಪಾಲಕ್ಕಾಡ್ ಕಂಚಿಕ್ಕೋಡ್ ಪಟಾಕಿ ಕಾರ್ಖಾನೆಯಲ್ಲಿ ದುರಂತ 13 ಸಾವು
1999 : ಪಾಲಕ್ಕಾಡ್ ಆಲೂರಿನಲ್ಲಿ ಪಟಾಕಿ ದುರಂತ 8 ಸಾವು
2006: ತ್ರಿಶ್ಶೂರ್ ಪೂರಂ ಪಟಾಕಿ ಸಂಗ್ರಹಶಾಲೆಯಲ್ಲಿ ಬೆಂಕಿ 7 ಸಾವು
2007 ಏಪ್ರಿಲ್: ಕೋಝಿಕ್ಕೋಡ್ ಪಟಾಕಿ ಅಂಗಡಿಯಲ್ಲಿ ಅಗ್ನಿ ದುರಂತ 8 ಸಾವು
2007 ಏಪ್ರಿಲ್ :ಮಲಪ್ಪುರಂ ವಳಾಂಚೇರಿ ಪಟಾಕಿ ಸಂಗ್ರಹಶಾಲೆಯಲ್ಲಿ , ಸ್ಫೋಟ 7 ಸಾವು
2008 ಫೆಬ್ರವರಿ: ಕೊಚ್ಚಿ ಮರಡ್ ಕೊಟ್ಟಾರಂ ಭಗವತಿ ದೇವಾಲಯದಲ್ಲಿ , ಸಾವು 3
2009 ಮಾರ್ಚ್: ತೃತ್ತಾಲ ಪಂಡಾರಕುಂಡ್ ಪಟಾಕಿ ತಯಾರಿಕಾ ಕೇಂದ್ರದಲ್ಲಿ , ಸಾವು 7
2009 ಮಾರ್ಚ್: ಕಾಸರಗೋಡಿನ ಚೆರ್ವತ್ತೂರ್ ನಲ್ಲ ಮಹಮ್ಮದ್ ಕುಂಞಿ ಆ್ಯಂಡ್ ಸನ್ಸ್ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ದುರಂತ , ಮೂರು ಸಾವು
2009 : ಕರಯ್‌ಕಾಡ್ ಅರಿಕ್ಕರ ಬಳಿ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ದುರಂತ, ಮೂರು ಸಾವು
2010 ಆಗಸ್ಟ್ :ಹರಿಪ್ಪಾಡ್ ಅನಧಿಕೃತ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ಸ್ಫೋಟ ನಾಲ್ಕು ಸಾವು
2011 ಫೆಬ್ರವರಿ: ಒಟ್ಟಪ್ಪಾಲಂ ಶೊರ್ನೂರ್ ರೈಲ್ವೇ ಸ್ಟೇಷನ್ ಬಳಿಯಿದ್ದ ಅನಧಿಕೃತ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ಸ್ಫೋಟ 13 ಸಾವು
2011 ಡಿಸೆಂಬರ್ : ಅತ್ತಾಣಿ ಸಿಮೆಂಟ್ ಬಳಿ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ಸ್ಫೋಟ 6 ಸಾವು
2013: ಪಾಲಕ್ಕಾಡ್ ಪನ್ನಿಯಂಕುರುಶ್ಶಿ ಕುಳಂಕುನ್ನತ್ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ಸ್ಫೋಟ 6 ಸಾವು