ದೇಶ

ಉಗ್ರ ಮೌಲನಾ ಮಸೂದ್ ಅಜರ್ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಹೊರಡಿಸಿದ ಎನ್ ಐಎ

Shilpa D

ನವದೆಹಲಿ: ಪಾಕಿಸ್ತಾನ ಮೂಲದ ಜೈಶ್ ಇ-ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲನಾ ಮಸೂದ್ ಅಜರ್ ವಿರುದ್ದ ರಾಷ್ಟ್ರೀಯ ತನಿಖಾ ದಳ ರೆಡ್ ಕಾರ್ನರ್ ನೊಟೀಸ್ ಹೊರಡಿಸಿದೆ.

ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದ ದಾಳಿ ಸಂಬಂಧ ಮೌಲಾನಾ ಮಸೂದ್ ಅಜರ್ ಮತ್ತು ಜೈಸ್-ಇ ಸಂಘಟನೆಯ ಇನ್ನು ಮೂವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ.

ಈ ಹಿಂದೆ ಮಸೂದ್ ಸೇರಿ ನಾಲ್ವರ ವಿರುದ್ದ ರಾಷ್ಟ್ರೀಯ ತನಿಖಾ ತಂಡ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಇನ್ನೂ ಮಸೂದ್ ಸಹೋದರ ಅಸಾದ್ ರೌಫ್, ಕಾಶಿಫ್ ಜಾನ್ , ಶಾಹಿದ್ ಲತೀಪ್ ವಿರುದ್ಧ ವೂ ವಾರಂಟ್ ಜಾರಿ ಮಾಡಲಾಗಿದೆ.

ಎನ್ ಐಎ ಸಲ್ಲಿಸಿದ ಪ್ರಬಲ ದಾಖಲೆಗಳ ಹಿನ್ನೆಲೆಯಲ್ಲಿ ಕೋರ್ಟ್ ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದ ದಾಳಿ ಸಂಬಂಧ ಭಯೋತ್ಪಾದಕರ, ಪೋಷಕರು, ಅವರ ವಿಳಾಸ, ವಯಕ್ತಿಕ ಮಾಹಿತಿ ಜೊತೆಗೆ ಜೆಇಎಂ ಸಂಘಟನೆ ಜೊತೆ ಉಗ್ರರು ನಡೆಸಿರುವ ದೂರವಾಣಿ ಸಂಭಾಷಣೆ ಗಳನ್ನು ಆಲಿಸಿ ನ್ಯಾಯಾಲಯ ನಿರ್ಧಾರ ಕೈಗೊಂಡಿದೆ.  

SCROLL FOR NEXT