ದೇಶ

ಪನಾಮ ಲೀಕ್ಸ್: ತಪ್ಪಿತಸ್ಥರನ್ನು ರಕ್ಷಿಸುವುದಿಲ್ಲ ಎಂದ ಕಾಂಗ್ರೆಸ್ ನಾಯಕ

Mainashree
ನವದೆಹಲಿ: ಪನಾಮ ಪೇಪರ್ಸ್ ಸೋರಿಕೆಯಲ್ಲಿ ಕಾಂಗ್ರೆಸ್ ನಾಯಕರ ಹೆಸರು ಪ್ರಕಟವಾದರೆ, ಅವರನ್ನು ಕಾಂಗ್ರೆಸ್ ರಕ್ಷಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಹೇಳಿದ್ದಾರೆ.
ಪನಾಮ ಪೇಪರ್ಸ್ ನಲ್ಲಿರುವ ಹೆಸರಗಳು ಬಹಿರಂಗಗೊಂಡರೆ, ಕಾಂಗ್ರೆಸ್ ತನ್ನ ಸಂಭ್ರಾಮಾಚರಣೆ ನಿಲ್ಲಿಸುತ್ತದೆ ಎಂದು ಅರುಣ್ ಜೇಟ್ಲಿ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಸಂದೀಪ್ ದೀಕ್ಷಿತ್, ಪನಾಮ ಪೇಪರ್ಸ್ ನಲ್ಲಿ ಕಾಂಗ್ರೆಸ್ ನವರ ಹೆಸರು ಕೇಳಿ ಬಂದರೆ, ಅವರ ರಕ್ಷಣೆಗೆ ಕಾಂಗ್ರೆಸ್ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. 
ಪನಾಮ ಪೇಪರ್ಸ್ ಪಟ್ಟಿಯಲ್ಲಿ ಬರುವ ಹೆಸರಗಳನ್ನು ಕೇಳಿ ಯಾರು ಸಂತಸ ಪಡುವುದಿಲ್ಲ ಎಂಬುದನ್ನು ಹಣಕಾಸು ಸಚಿವರು ಅರಿತುಕೊಳ್ಳಬೇಕಿದೆ. ಒಂದು ವೇಳೆ ಮುಂಬರುವ ದಿನಗಳಲ್ಲಿ ಪನಾಮ ಪೇಪರ್ಸ್ ಪಟ್ಟಿಯಲ್ಲಿ ಕಾಂಗ್ರೆಸ್ ನವರ ಹೆಸರು ಬಂದರೆ, ಅವರನ್ನು ನಾವು ರಕ್ಷಿಸುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಯಾರೇ ಆಗಲಿ, ಕಾನೂನು ಉಲ್ಲಂಘಿಸಿದವರು ಶಿಕ್ಷೆ ಅನುಭವಿಸಲೇಬೇಕು. ಪನಾಮ ಪಟ್ಟಿಯಲ್ಲಿ ಭಾರತೀಯರ ಹೆಸರು ಕೇಳಿ ಕಾಂಗ್ರೆಸ್ ಸಂಭ್ರಮಾಚರಣೆ ಮಾಡಿಲ್ಲ. ಬದಲಾಗಿ ವಿಷಾಧಿಸಿದೆ. ಪನಾಮ ಪೇಪರ್ಸ್ ನಲ್ಲಿ ಭಾರತೀಯ ಉದ್ಯಮಿಗಳು ಸೇರಿ ಪ್ರಮುಖ ಗಣ್ಯರ ಹೆಸರು ಪ್ರಸ್ತಾಪವಾಗಿರುವುದಕ್ಕೆ ವಿಷಾಧ ವ್ಯಕ್ತಪಡಿಸಿದೆ ಎಂದ ಅವರು, ಪನಾಮ ಪೇಪರ್ಸ್ ನಲ್ಲಿ ಕಾಂಗ್ರೆಸ್ ನವರ ಹೆಸರು ಬರುತ್ತದೆ ಎಂದು ಜೇಟ್ಲಿ ಹೇಗೆ ತಿಳಿದಿದೆ? ಅಲ್ಲದೇ, ಇನ್ನು ಈ ಕುರಿತು ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
SCROLL FOR NEXT