ಲಕ್ನೋ: ಉಕ್ರೇನ್ ನಲ್ಲಿ ಕೊಲೆಯಾದ ಭಾರತೀಯ ವಿದ್ಯಾರ್ಥಿಗಳ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಘೋಷಿಸಿದ್ದಾರೆ,
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿರುವ ಅಖಿಲೇಶ್ ಯಾದವ್ ಎಲ್ಲಾ ರೀತಿಯ ನೆರವುಗಳನ್ನು ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ನೀಡುವಂತೆ ಆದೇಶಿಸಿದ್ದಾರೆ.
ಭಾರತೀಯ ರಾಯಭಾರ ಕಚೇರಿಯ ನೆರವು ಪಡೆದು, ಶವಗಳನ್ನು ಭಾರತಕ್ಕೆ ವಾಪಸ್ ತರಲು ಅಗತ್ಯ ಸೌಲಭ್ಯ ಒದಗಿಸುವಂತೆ ಎಲ್ಲಾ ರೀತಿಯ ಸಹಾಯ ನೀಡುವಂತೆ ತಿಳಿಸಿದ್ದಾರೆ.
ಏಪ್ರಿಲ್ 10 ರಂದು ಮುಜಾಫರ್ ನಗರದ ಪ್ರಣವ್ ಸಾಂಡಿಯಾಲಾ ಮತ್ತು ಘಾಜಿಯಾಬಾದ್ ನ ಅಂಕುರ್ ಸಿಂಗ್ ರನ್ನು ಉಕ್ರೇನ್ ನಲ್ಲಿ ಇರಿದು ಕೊಲ್ಲಲಾಗಿತ್ತು, ತೀವ್ರ ಗಾಯಗೊಂಡಿರುವ ಆಗ್ರಾದ ಇಂದ್ರಜೀತ್ ಸಿಂಗ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.