ದೇಶ

'ಭಾರತ ಸರ್ಕಾರ ಆಫ್ರಿಕಾ, ಬಾಂಗ್ಲಾ ದೇಶ, ಇರಾನ್ ನಲ್ಲಿ ಬಂದರು ನಿರ್ಮಿಸಲು ಉತ್ಸುಕವಾಗಿದೆ'

Srinivas Rao BV

ನವದೆಹಲಿ: ಭಾರತ ಸರ್ಕಾರ ಆಫ್ರಿಕಾ, ಬಾಂಗ್ಲಾ ದೇಶ, ಇರಾನ್ ನ ಬಂದರುಗಳನ್ನು ಅಭಿವೃದ್ಧಿಪಡಿಸಲು ಉತ್ಸುಕತೆ ತೋರಿದೆ.
ಆಫ್ರಿಕಾದ ದೇಶಗಳ ಮುಖ್ಯಸ್ಥರೊಂದಿಗೆ ನಡೆದ ಇತ್ತೀಚಿನ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, " ರಸ್ತೆ ನಿರ್ಮಾಣ, ಬಂದರುಗಳ ನಿರ್ಮಾಣ, ಅಭಿವೃದ್ಧಿ ಪಡಿಸಲು ಭಾರತ ಸರ್ಕಾರ ಆಫ್ರಿಕಾದ ರಾಷ್ಟ್ರಗಳೊಂದಿಗೆ ಕೈ ಜೋಡಿಸಲು ಸಿದ್ಧವಿದೆ ಎಂಬ ಸಂದೇಶ ರವಾನಿಸಿದ್ದಾರೆ.
ಭಾರತ ಸರ್ಕಾರ ಆಫ್ರಿಕಾದ ರಾಷ್ಟ್ರಗಳಲ್ಲಿ ಬಂದರು ನಿರ್ಮಾಣ, ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡರೆ ನಮ್ಮ ಇಲಾಖೆ ಅದರ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ಹೆದ್ದಾರಿ, ಬಂದರು ಇಲಾಖೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ವಿದೇಶಿ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿರುವ ನಿತಿನ್ ಗಡ್ಕರಿ, ಬಾಂಗ್ಲಾದೇಶ, ಭೂತಾನ್, ನೇಪಾಳದೊಂದಿಗೆ ಭಾರತ ಸರ್ಕಾರದ ಪರಸ್ಪರ ಮೂಲಸೌಕರ್ಯ ಅಭಿವೃದ್ಧಿ ಒಪ್ಪಂದ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವು ಸುಧಾರಣೆಗಳನ್ನು ಕೈಗೊಂಡಿದೆ. ಭಾರತ ಸರ್ಕಾರ ಈಗಾಗಲೇ ಪಶ್ಚಿಮ ಬಾಂಗ್ಲಾದಲ್ಲಿ ಬಂದರು ನಿರ್ಮಿಸಲು ಪ್ರಾಥಮಿಕ ಕ್ರಮಗಳನ್ನು ಕೈಗೊಂಡಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

SCROLL FOR NEXT