ದೇಶ

ನಾಳೆಯಿಂದ ಎರಡನೇ ಹಂತದ ಸಮ-ಬೆಸ ಯೋಜನೆಗೆ ದೆಹಲಿ ಸಜ್ಜು

Shilpa D

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎರಡನೇ ಹಂತದ ಸಮ-ಬೆಸ ಯೋಜನೆ ಶುಕ್ರವಾರದಿಂದ ಅಂದರೇ ಏಪ್ರಿಲ್ 15 ರಿಂದ ಜಾರಿಗೆ ಬರಲಿದೆ.

ನಿಯಮದ ಉಲ್ಲಂಘನೆಯಾಗದಂತೆ ಕಚೇರಿಗೆ ಹೋಗಲು, ಮಕ್ಕಳನ್ನು ಶಾಲೆಗಳಿಗೆ ತಲುಪಿಸಲು ಸೂಕ್ತ ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಸಮ-ಬೆಸ ಯೋಜನೆಯ ಪ್ರಕಾರ ಸಮ ಸಂಖ್ಯೆಯ ದಿನಾಂಕಗಳಂದು ಸಮಸಂಖ್ಯೆಯಿಂದ ಕೊನೆಗೊಳ್ಳುವ ವಾಹನಗಳು ಹಾಗೂ ಬೆಸ ಸಂಖ್ಯೆಯ ದಿನಾಂಕಗಳಂದು ಬೆಸ ಸಂಖ್ಯೆಯಿಂದ ಕೊನೆಗೊಳ್ಳುವ ವಾಹನಗಳು ಮಾತ್ರ ನಗರದಲ್ಲಿ ಸಂಚರಿಸಲು ಅವಕಾಶವಿದೆ.

ಏಪ್ರಿಲ್ 15ರಿಂದ 30 ರವರೆಗೆ ಭಾನುವಾರ ಹೊರತು ಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಯೋಜನೆ ಜಾರಿಯಲ್ಲಿ ಇರುತ್ತದೆ.

ಸಮಯಕ್ಕೆ ಸರಿಯಾಗಿ ಇರಬೇಕಾದ ಜಾಗ ತಲುಪಲು ಹೇಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಖಾತರಿ ಮಾಡಿಕೊಳ್ಳಲು ದೆಹಲಿ ನಿವಾಸಿಗಳು ಪರ್ಯಾಯ ಯೋಜನೆ ರೂಪಿಸಿಕೊಳ್ಳುತ್ತಾರೆ.

SCROLL FOR NEXT