ದೇಶ

ಗುರಂಗಾವ್ ನಂತರ ಶಿಮ್ಲಾಗೆ ಶ್ಯಾಮಲ ಎಂದು ಮರುನಾಮಕರಣಕ್ಕೆ ವಿಎಚ್ ಪಿ ಆಗ್ರಹ

Shilpa D

ಶಿಮ್ಲಾ: ಈಶಾನ್ಯ ರಾಜ್ಯ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾಗೆ ಮರುನಾಮಕರಣ ಮಾಡಿ ಶ್ಯಾಮಲಾ ಎಂದು ಹೆಸರಿಡುವಂತೆ  ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಶಿಮ್ಲಾವನ್ನು  ಬ್ರಿಟಿಷರು ತಮ್ಮ ಆಡಳಿತ  ಕಾಲದಲ್ಲಿ ಬೇಸಿಗೆ ರಾಜಧಾನಿಯಾಗಿ ಮಾಡಿಕೊಂಡಿದ್ದರು.

ಗುರ್ಗಾಂವ್ ಮತ್ತು ಮೇವತ್‌ಗಳ ಮರು ನಾಮಕರಣ ಬೇಡಿಕೆಯ ಬಳಿಕ, ರಾಜ್ಯದ ಚಾರಿತ್ರಿಕ ಸ್ಥಳಗಳ ಹೆಸರು ಬದಲಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಯಪ್ರವೃತ್ತವಾಗಬೇಕು ಎಂದು ವಿಎಚ್‌ಪಿ ಸಂಘಟನಾ ಕಾರ್ಯದರ್ಶಿ ಮನೋಜ್ ಕುಮಾರ್ ಅವರು ಹಿಮಾಚಲ ಪ್ರದೇಶದ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ಮನವಿ ಮಾಡಿದ್ದಾರೆ.

ಶ್ಯಾಮಲಾ ಎಂದರೆ ನೀಲಿ ಮಹಿಳೆ ಎಂಬ ಅರ್ಥವಿದ್ದು, ಕಾಳಿ ದೇವಿ ಎಂದೂ ಹೇಳಲಾಗುತ್ತಿದೆ, ಕಾಳಿ ದೇವಾಲಯವೂ ಇಲ್ಲಿದೆ. ಶ್ಯಾಮಲಾ ಎಂದರೆ ಬ್ಲ್ಯು ಹೌಸ್‌ ಎಂಬ ಅರ್ಥವಿದೆ. ಅದು ಜಕು ಪರ್ವತಪ್ರದೇಶದಲ್ಲಿರುವ ಹನುಮಂತ ದೇಗುಲ ಎಂಬ ಮತ್ತೊಂದು ವಾದವೂ ಇದೆ.

SCROLL FOR NEXT