ಪ್ರಿಯಾಂಕ 
ದೇಶ

ಗಂಡನಿಗೆ ಹೇಳಿದ ಸುಳ್ಳನ್ನು ನಿಜ ಮಾಡಲು ಹೋದ ಪತ್ನಿ ಪೊಲೀಸರ ಅತಿಥಿ

ಗಂಡನಿಗೆ ಹೇಳಿದ ಸುಳ್ಳನ್ನು ನಿಜ ಮಾಡಲು ಹೋದ ಪತ್ನಿ ಪೊಲೀಸರ ಅತಿಥಿಯಾಗಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ...

ಅಹಮದಾಬಾದ್: ಗಂಡನಿಗೆ ಹೇಳಿದ ಸುಳ್ಳನ್ನು ನಿಜ ಮಾಡಲು ಹೋದ ಪತ್ನಿ ಪೊಲೀಸರ ಅತಿಥಿಯಾಗಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.

ಅಹಮದಾಬಾದ್  ನ ಶಹಾಪುರ ನಿವಾಸಿ ಪ್ರಿಯಾಂಕಾ ಪಾಟೀಲ್ ಜೈಲು ಸೇರಿರುವ ಮಹಿಳೆ. ಮದುವೆಯಾಗುವ ಮುನ್ನ ತನ್ನ ಪತಿಯನ್ನು ಮೆಚ್ಚಿಸುವ ಸಲುವಾಗಿ ರೈಲ್ವೆ ಸುರಕ್ಷಾ ದಳದ ಸಿಬ್ಬಂದಿ ಎಂದು ಹೇಳಿಕೊಂಡಿದ್ದಳು.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ಸಂಜಯ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಪ್ರೀತಿಸುವ ವೇಳೆ ತಾನು ಆರ್ ಪಿಎಫ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದಳು.

ವಿವಾಹವಾದ ನಂತರ ತನ್ನ ಗಂಡ ಹಾಗೂ ಅತ್ತೆ ಮಾವನನ್ನು ನಂಬಿಸಲು ಪ್ರತಿ ದಿನ ಆಕೆ ಪೊಲೀಸ್ ಸಮವಸ್ತ್ರ ಧರಿಸಿಕೊಂಡು ಹೋಗುತ್ತಿದ್ದಳು. ಬೆಳಗ್ಗೆ ಸಂಜಯ್ ಪಟೇಲ್ ಆಕೆಯನ್ನು  ರೈಲ್ವೆ ನಿಲ್ದಾಣದ ಬಳಿ ಬಿಡುತ್ತಿದ್ದ.  ನಂತರ ಸಂಜೆ ಆಕೆ ತಾನೇ ವಾಪಸ್ ಮನೆಗೆ ಬರುತ್ತಿದ್ದಳು.

ಕೆಲ ದಿನಗಳ ಹಿಂದೆ ಈಕೆ ನಕಲಿ ಪೊಲೀಸ್ ಎಂಬುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.ನಂತರ ಪ್ರಿಯಾಂಕಳನ್ನು ವಿಚಾರಣೆಗೆ ಒಳಪಡಿಸಿದಾಗ ಪೊಲೀಸರ ಬಳಿ ಸತ್ಯ ಹೇಳಿದ್ದಾಳೆ.

ರೈಲ್ವೆ ನಿಲ್ದಾಣದ ಬಳಿಯಿರುವ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದಾಗ ಆಕೆಯಿಂದ ಯಾವುದೇ ಅಪರಾಧಗಳು ಆಗಿಲ್ಲವೆಂದು, ಕೇವಲ ಮನೆಯವರನ್ನು ಮೆಚ್ಚಿಸಲು ನಕಲಿ ಪೊಲೀಸ್ ಆಗಿದ್ದಳೆಂದು, ಯಾವ ದುರುದ್ದೇಶವೂ ಇರಲಿಲ್ಲ ಎಂದು ತಿಳಿದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಪ್ರತಿದಿನ ಕೆಲಸಕ್ಕೆ ಹೋಗುವಾಗ ಪೊಲೀಸ್ ಸಮವಸ್ತ್ರ ಧರಿಸುತ್ತಿದ್ದ ಆಕೆಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕ ಅಷ್ಟೇ ಅಲ್ಲ, ಭಾರತಕ್ಕೂ ಕಾದಿತ್ತು ಕಂಟಕ: 9/11 ರಕ್ತಚರಿತ್ರೆಗೂ ಮುನ್ನ INDIA ಮೇಲಿತ್ತು ಲಾಡೆನ್ ಕಣ್ಣು: 25 ವರ್ಷಗಳ ಬಳಿಕ ಕರಾಳ ರಹಸ್ಯ ಬಯಲು..!

ಅಮೆರಿಕ-ಇಸ್ರೇಲ್ ಮುಂದೆ ಎಂದಿಗೂ ತಲೆಬಾಗಲ್ಲ, ದಬ್ಬಾಳಿಕೆಗೆ ಜಗ್ಗಲ್ಲ: ನಾಗರಿಕ ರಕ್ಷಣಾ ನೆಲೆಗಳ ಮೇಲಿನ ದಾಳಿಗೆ ಇರಾನ್ ತೀವ್ರ ಆಕ್ರೋಶ..!

ಅಮೆರಿಕಾ ಸರ್ವಾಧಿಕಾರತ್ವ-ಆರ್ಥಿಕ ನಿರ್ಬಂಧಗಳಿಗೆ ಅಂತ್ಯ ಹಾಡಲು 'BRICS' ಒಕ್ಕೂಟ ಸ್ಥಾಪನೆ: Iran

ಅಜಿತ್ ಕುಮಾರ್ 'ಲಂಡನ್ ರೇಸ್' ನಲ್ಲೂ ಒಟ್ಟಾಗಿ ಕಾಣಿಸಿಕೊಂಡ ಸಿಎಂ ವಿಜಯ್, ತ್ರಿಶಾ ಕೃಷ್ಣನ್! ತಲಾ, ದಳಪತಿ ಫ್ಯಾನ್ಸ್ ಫುಲ್ ಖುಷ್! Video

BBK 13: ಮೊದಲ ಪಂಚಾಯಿತಿಯಲ್ಲಿ ಸ್ಪರ್ಧಿಗಳಿಗೆ ಫುಲ್‌ ಕ್ಲಾಸ್‌ ತೆಗೆದುಕೊಂಡ ಕಿಚ್ಚ! ಜಗ್ಗಿ ಕ್ಷಮೆ ಕೇಳಿದ ತಾಂಡವ್, ಗಗನ್ ಮುಖ ನೋಡಕ್ಕೆ ಆಗ್ತಿರಲಿಲ್ಲ!