ದೇಶ

ಬರಪೀಡಿತ ಲಾಥೂರ್ ನಲ್ಲಿ ಸಚಿವರ ಹೆಲಿಪ್ಯಾಡ್ ಗೆ ಸಾವಿರಾರು ಲೀಟರ್ ನೀರು ವ್ಯಯ

Shilpa D

ಮುಂಬಯಿ: ಮಹಾರಾಷ್ಟ್ರದ ಬರಪೀಡಿತ ಲಾಥೂರ್  ಜಿಲ್ಲೆಯ ಮರಾಠವಾಡದಲ್ಲಿ ಸಚಿವ ಏಕಾಂತ್ ಖಾಡ್ಸೆ ಅವರ ಆಗಮನಕ್ಕಾಗಿ ಹೆಲಿಪ್ಯಾಡ್ ಸಿದ್ದಗೊಳಿಸಲು ಸಾವಿರಾರು ಲೀಟರ್ ನೀರನ್ನು ಖರ್ಚು ಮಾಡಲಾಗಿದೆ.

ಲಾಥೂರ್ ಗೆ ಭೇಟಿ ನೀಡಲಿದ್ದ ಖಾಡ್ಸೆ ಗಾಗಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ ಮಾಡಲು ಅಮೂಲ್ಯವಾದ ನೀರನ್ನು ವ್ಯಯಿಸಲಾಗಿದೆ.

ಒಂದೆಡೆ ಬರದಿಂದಾಗಿ ನೀರಿಲ್ಲದೇ ಜನ- ಜಾನುವಾರುಗಳು ಪರಿತಪಿಸುತ್ತಿದ್ದರೇ ಮತ್ತೊಂದೆಡೆ ಬರಪೀಡಿತ ಪ್ರದೇಶಗಳ ಪರಿಶೀಲನೆಗಾಗಿ ಆಗಮಿಸಿದ ಸಚಿವರ ಹೆಲಿಪ್ಯಾಡ್  ಗಾಗಿ ನೀರನ್ನು ಖರ್ಚು ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಜವಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಹೆಲಿಕಾಪ್ಟರ್ ನಲ್ಲಿ ಬರುವ ಬದಲು ಬೇರೆ ಮಾರ್ಗ ಅನುಸರಿಸಬಹುದಿತ್ತು. ಇಷ್ಟೊಂದು ಪ್ರಮಾಣದ ನೀರು ಖರ್ಚು ಮಾಡುವ ಅಗತ್ಯವಿರಲಿಲ್ಲ.

SCROLL FOR NEXT