ದೇಶ

ಪಾಕ್ ನಲ್ಲಿರುವ ಹಿಂದೂಗಳಿಗೆ ಭಾರತದಲ್ಲಿ ಆಸ್ತಿ ಖರೀದಿಸಲು ಅವಕಾಶ ಕಲ್ಪಿಸಲು ಕೇಂದ್ರ ಚಿಂತನೆ

Shilpa D

ನವದೆಹಲಿ: ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಭಾರತದಲ್ಲಿ ಆಸ್ತಿ ಹೊಂದುವ ಮತ್ತು ಬ್ಯಾಂಕ್ ಖಾತೆ ಸ್ಥಾಪಿಸುವ ಅವಕಾಶವನ್ನು ಕಲ್ಪಿಸಲು ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ.

ದೀರ್ಘಾವದಿ ವೀಸಾ ಹೊಂದಿ ಪಾಕಿಸ್ತಾನದಲ್ಲಿ ನೆಲೆಸಿರುವ ಅಲ್ಪ ಸಂಖ್ಯಾತ ಸಮುದಾಯಗಳಿಗೆ  ಪಾನ್ ಕಾರ್ಡ್, ಆಧಾರ್ ಕಾರ್ಡ್, ಸೇರಿದಂತೆ ಹಲವು ವಿಶೇಷ ಸೌಲಭ್ಯಗಳನ್ನು ನೀಡಲು ಎನ್ ಡಿ ಎ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಭಾರತೀಯ ಪ್ರಜೆ ಎಂದು ದಾಖಲಿಸಿಕೊಳ್ಳಲು ನೀಡಬೇಕಾಗಿದ್ದ  ಶುಲ್ಕವನ್ನ 15 ಸಾವಿರದಿಂದ 100 ರೂಗೆ ಇಳಿಸಲು ಸಹ ನಿರ್ಧರಿಸಿದೆ.

ಪಾಕಿಸ್ತಾನ,  ಬಾಂಗ್ಲಾದೇಶ, ಆಫ್ಘಾನಿಸ್ತಾನಗಳಿಂದ ಬಂದು ನಿರಾಶ್ರತರಾಗಿರುವ ಅಲ್ಪಸಂಖ್ಯಾತರು ಸುಮಾರು 2 ಲಕ್ಷ ಜನರಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಅದರಲ್ಲಿ  ಹಿಂದೂಗಳು ಮತ್ತು ಸಿಖ್ ಪಂಗಡದವರೇ ಹೆಚ್ಚಾಗಿದ್ದಾರೆ.

ಸುಮಾರು 400 ಪಾಕಿಸ್ತಾನಿ ಹಿಂದೂ ನಿರಾಶ್ರಿತರು ಜೋಧ್ ಪುರ, ಜೈಪುರ, ರಾಯ್ ಪುರ, ಅಹಮದಾಬಾದ್, ರಾಜ್ ಕೋಟ್, ಕಚ್, ಭೂಪಾಲ್, ಇಂದೋರ್ ದೆಹಲಿ, ನಾಗಪುರ ಮತ್ತು ಲಕ್ನೋಗಳಲ್ಲಿ ನೆಲೆನಿಂತಿದ್ದಾರೆ.

ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತ ಸಮುದಾಯವರು ಅನುಭವಿಸುತ್ತಿರು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರ, ಅವರೆಲ್ಲಾ ಬಂದು ಭಾರತದಲ್ಲಿ ನೆಲೆಸಲು ಅವಕಾಶ ಕಲ್ಪಿಸಲು ಮುಂದಾಗಿದೆ.

SCROLL FOR NEXT