ಇಂಫಾಲ್: ನಿಷೇಧಿದ ಮಣಿಪುರ ನಾಗಾ ಕ್ರಾಂತಿಕಾರಿ ರಂಗ(ಎಂಎನ್ ಆರ್ ಎಫ್)ದ ಮೂವರು ಉಗ್ರರನ್ನು ಸೋಮವಾರ ಬಂಧಿಸಲಾಗಿದ್ದು, ಅವರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಹ ವಶ ಪಡಿಸಿಕೊಳ್ಳಲಾಗಿದೆ.
ಇಂದು ಚಂಡೆಲ್ ಜಿಲ್ಲೆಯ ಐಬೊಲ್ ಜೌಪಿ ಪ್ರದೇಶದಲ್ಲಿ ಅಸ್ಸಾಂ ರೈಫಲ್ಸ್ ನಡೆಸಿದ ಕಾರ್ಯಾಚರಣೆಯಲ್ಲಿ, ಮೂವರು ಉಗ್ರರನ್ನು, ಹಾಗೂ ಉಗ್ರರು ಮಾರ್ಗದರ್ಶನ ಮಾಡುತ್ತಿದ್ದ 30 ವರ್ಷದ ಓರ್ವ ಮೈನ್ಮಾರ್ ಪ್ರಜೆಯನ್ನು ಸಹ ಬಂಧಿಸಲಾಗಿದೆ.
ಪೊಲೀಸರು ಉಗ್ರರಿಂದ ಮೂರು ರೈಫಲ್ಸ್, ಆರು ಮ್ಯಾಗಜೀನ್ ಗಳು ಹಾಗೂ ಚೀನಾದ ಹ್ಯಾಂಡ್ ಗ್ರನೇಡ್ ಸೇರಿದಂತೆ ನೂರಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ರೈಫಲ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.