ದೇಶ

ಇಶ್ರಾತ್ ಜಹಾನ್ ಪ್ರಕರಣ: ಕಾಂಗ್ರೆಸ್ ಕ್ಷಮೆಯಾಚಿಸುವಂತೆ ಬಿಜೆಪಿ ಆಗ್ರಹ

Manjula VN

ನವದೆಹಲಿ: ಆಪರಾಧಿಗಳಿಗೆ ಸಹಾಯ ಮಾಡಿದ ಕಾಂಗ್ರೆಸ್ ಪಕ್ಷ ದೇಶದ ಜನತೆ ಬಳಿ ಕ್ಷಮೆಯಾಚಿಸಬೇಕೆಂದು ಭಾರತೀಯ ಜನತಾ ಪಕ್ಷ ಮಂಗಳವಾರ ಆಗ್ರಹಿಸಿದೆ.

ಮಾಜಿ ಗೃಹ ಸಚಿವ ಪಿ. ಚಿದಂಬರಂ ವಿರುದ್ಧ ಕಿಡಿಕಾರಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು, ಒಬ್ಬ ಭಯೋತ್ಪಾದಕರನ್ನು ರಾಷ್ಟ್ರೀಯ ಪ್ರಜೆಯೆಂದು ಬಿಂಬಿಸುವುದು ಕೆಟ್ಟ ಕೆಲಸ. ಕಾಂಗ್ರೆಸ್ ಪಕ್ಷ ಪಾಪಗಳ ಗುಹೆಯಾಗಿದ್ದು, ಇದೀಗ ಆ ಪಾಪಗಳು ಗುಹೆಯಿಂದ ಹೊರಬರುತ್ತಿದೆ ಎಂದು ಹೇಳಿದ್ದಾರೆ.

ಭಯೋತ್ಪಾದಕರನ್ನು ರಾಷ್ಟ್ರೀಯ ಪ್ರಜೆಯೆಂದು ಹೇಳಿ ಅಪರಾಧಿಗಳಿಗೆ ಒಬ್ಬ ಗೃಹ ಸಚಿವರು ಸಹಾಯ ಮಾಡುತ್ತಿರುವುದು ಇದೇ ಮೊದಲು. ಕಾಂಗ್ರೆಸ್ ಪಕ್ಷ ದೇಶದ ಜನತೆ ಬಳಿ ಕ್ಷಮೆಯಾಚಿಸಬೇಕೆಂದು ಹೇಳಿದ್ದಾರೆ.

ಇಶ್ರಾತ್ ಜಹಾನ್ ಪ್ರಕರಣ ಮುಂದಿಟ್ಟುಕೊಂಡು ಗುಜರಾತಿನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ರಾಜಕೀಯವಾಗಿ ಮುಗಿಸಲು ಯುಪಿಎ ಸರ್ಕಾರ ಭಾರೀ ಸಂಚು ರೂಪಿಸಿದ್ದ ಅಂಶ ಇತ್ತೀಚೆಗಷ್ಟೇ ಬಯಲಾಗಿತ್ತು. ಇಶ್ರತ್ ಜಹಾನ್ ಲಷ್ಕರ್ ಸದಸ್ಯೆಯಾಗಿದ್ದಳು ಎಂಬ ಮೂಲ ಅಫಿಡವಿಟ್ ಗೆ ಅಂದಿನ ಗೃಹ ಸಚಿವರಾಗಿದ್ದ ಪಿ. ಚಿದಂಬರಂ ಅವರೇ ಸಹಿ ಹಾಕಿದ್ದರು ಎಂಬ ವಿಚಾರವನ್ನು ಖಾಸಗಿ ಮಾಧ್ಯಮವೊಂದು ಬಹಿರಂಗ ಪಡಿಸಿತ್ತು. ಈ ಹಿಂದೆ ಪ್ರಕರಣ ಸಂಬಂಧಿಸಿ ಚಿದಂಬರಂ ಹೇಳಿಕೆಯೊಂದನ್ನು ನೀಡಿದ್ದರು. ಅಫಿಡವಿಟ್ ವಿಷಯ ನನಗೆ ಗೊತ್ತೇ ಇರಲಿಲ್ಲ ಎಂದು ಹೇಳಿದ್ದರು.

SCROLL FOR NEXT