ಶಕ್ತಿಮಾನ್ 
ದೇಶ

ಬಿಜೆಪಿ ಪ್ರತಿಭಟನೆ ವೇಳೆ ಗಾಯಗೊಂಡಿದ್ದ ಪೊಲೀಸ್ ಕುದುರೆ 'ಶಕ್ತಿಮಾನ್' ಇನ್ನಿಲ್ಲ

ಬಿಜೆಪಿ ಪ್ರತಿಭಟನೆ ವೇಳೆ ತೀವ್ರವಾಗಿ ಗಾಯಗೊಂಡು ಕಾಲು ಮುರಿದುಕೊಂಡಿದ್ದ ಉತ್ತರಾಖಂಡ್ ಪೊಲೀಸ್ ಕುದುರೆ ಶಕ್ತಿಮಾನ್...

ಡೆಹ್ರಾಡೂನ್: ಬಿಜೆಪಿ ಪ್ರತಿಭಟನೆ ವೇಳೆ ತೀವ್ರವಾಗಿ ಗಾಯಗೊಂಡು ಕಾಲು ಮುರಿದುಕೊಂಡಿದ್ದ ಉತ್ತರಾಖಂಡ್ ಪೊಲೀಸ್ ಕುದುರೆ ಶಕ್ತಿಮಾನ್ ಬುಧವಾರ ಸಂಜೆ ಸಾವನ್ನಪ್ಪಿದೆ.
ಕಳೆದ ಮಾರ್ಚ್ 14ರಂದು ಡೆಹ್ರಾಡೂನ್ ನಲ್ಲಿ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಹರಿಶ್ ರಾವತ್ ವಿರುದ್ಧ ನಡೆದ ಬಿಜೆಪಿ ಪ್ರತಿಭಟನೆ ವೇಳೆ ಕಾಲು ಮುರಿದುಕೊಂಡಿದ್ದ ಶಕ್ತಿಮಾನ್‌ ಗೆ ಹತ್ತು ವೈದ್ಯರ ತಂಡ ನಿರಂತರ ಐದು ತಾಸುಗಳ ಶಸ್ತ್ರ ಚಿಕಿತ್ಸೆ ನಡೆಸಿ ಅದರ ಕಾಲು ಬಹುಮಟ್ಟಿಗೆ ಉಳಿಯುವಂತೆ ಮಾಡಲು ಯತ್ನಿಸಿ, ಅಂತಿಮವಾಗಿ ಕೃತಕ ಕಾಲು ಜೋಡಿಸಿದ್ದರು. ಆದರೂ ಸಂಪೂರ್ಣವಾಗಿ ಗುಣಮುಖವಾಗಲು ಅದಕ್ಕೆ ಸಾಧ್ಯವಾಗಿರಲಿಲ್ಲ,
ಪ್ರತಿಭಟನೆ ವೇಳೆ ಮುಸ್ಸೂರಿ ಬಿಜೆಪಿ ಶಾಸಕ ಗಣೇಶ್ ಜೋಷಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶಕ್ತಿಮಾನ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ಜೋಷಿಯವರ ಹೊಡೆತಕ್ಕೆ ಕುದುರೆಯ ಕಾಲು ಮುರಿದು ಹೋಗಿತ್ತು. ಈ ಸಂಬಂಧ ಅವರನ್ನು ಬಂಧಿಸಲಾಗಿತ್ತು.
13 ವರ್ಷ ಪ್ರಾಯದ ಶಕ್ತಿಮಾನ್‌ ಕುದುರೆ ಕಳೆದ ಹತ್ತು ವರ್ಷಗಳಿಂದ ಸೇವೆಯಲ್ಲಿದ್ದು ಪೊಲೀಸರ ಹೆಮ್ಮೆ ಎನಿಸಿಕೊಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಕುರಿತು ಬ್ರಿಟನ್ ನೇತೃತ್ವದಲ್ಲಿ ಮಾತುಕತೆ; ಭಾರತ ಭಾಗಿ: ತೈಲ ಬಿಕ್ಕಟ್ಟಿಗೆ ಬ್ರೇಕ್?

"ಸೇನಾ ದಾಳಿ ಮಾರ್ಗದಿಂದ...": ಇರಾನ್ ನ್ನು ಶಿಲಾಯುಗಕ್ಕೆ ಅಟ್ಟುವ ಟ್ರಂಪ್ ಬೆದರಿಕೆಗೆ ಚೀನಾ ತೀಕ್ಷ್ಣ ಪ್ರತಿಕ್ರಿಯೆ...

IPL 2026: RCB ವಿರುದ್ಧದ ಹೈ-ವೋಲ್ಟೇಜ್‌ ಪಂದ್ಯಕ್ಕೂ ಮೊದಲೇ ಧೋನಿ ಕಮ್‌ಬ್ಯಾಕ್‌?

'Told Dad It's Not Okay': ಬಹಿರಂಗವಾಗಿ ಧೋನಿ, ಕಪಿಲ್ ದೇವ್ ಕ್ಷಮೆಯಾಚಿಸಿದ ಯುವರಾಜ್ ಸಿಂಗ್!

Dhurandhar 2 ಬಾಕ್ಸ್ ಆಫೀಸ್ ಆರ್ಭಟಕ್ಕೆ ಬೆದರಿದ 'ಭೂತ್ ಬಂಗ್ಲಾ'; ಬಿಡುಗಡೆ ಏಪ್ರಿಲ್ 16ಕ್ಕೆ ಮುಂದೂಡಿಕೆ

SCROLL FOR NEXT