ನವದೆಹಲಿ: ಶತಕೋಟಿಯಷ್ಟು ಗ್ರಾಹಕರನ್ನು ಒಳಗೊಂಡಿರುವ ದಿನಕ್ಕೆ 250 ಕೋಟಿಗೂ ಅಧಿಕ ವಹಿವಾಟು ನಡೆಸುವ ನಾಲ್ಕರಿಂದ-ಐದು ದೂರಸಂಪರ್ಕ ಸಂಸ್ಥೆಗಳ ನಿಯಂತ್ರಣ ಕೂಟ ಕಾಲ್ ಡ್ರಾಪ್ಸ್ ಗಳನ್ನು ಪರಿಶೀಲಿಸಲು ಸೇವೆಗಳ ಸುಧಾರಣೆಗೆ ತಮ್ಮ ಜಾಲದಲ್ಲಿ ಹೂಡಿಕೆ ಮಾಡುತ್ತಿಲ್ಲ ಎಂದು ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.
ಹೊರಹೋಗುವ ಕರೆಗಳಿಂದ ದಿನಕ್ಕೆ 250 ಕೋಟಿ ರೂಪಾಯಿಯಷ್ಟು ಆದಾಯ ಮಾಡುವ ನಾಲ್ಕೈದು ಟೆಲಿಕಾಂ ಕಂಪೆನಿಗಳಿವೆ. ಅವುಗಳ ಬೆಳವಣಿಗೆ ಅಗಾಧವಾಗಿದ್ದರೂ ಕೂಡ ತಮ್ಮ ನೆಟ್ ವರ್ಕ್ ನಲ್ಲಿ ಅಲ್ಪಪ್ರಮಾಣದಲ್ಲಿ ಹೂಡಿಕೆ ಮಾಡುತ್ತವೆ. ತಮ್ಮ ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಕಾಲ್ ಡ್ರಾಪ್ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿಲ್ಲ ಎಂದು ಅಟಾರ್ನಿ ಜನರಲ್ ಮುಕುಲ್ ರೊಹಟ್ಗಿ ತಿಳಿಸಿದ್ದಾರೆ.
ಟ್ರಾಯ್ ಪರ ವಾದ ಮಂಡಿಸಿರುವ ಅವರು, ದೂರಸಂಪರ್ಕ ಸಂಸ್ಥೆಗಳ ಮೇಲೆ ಪ್ರಾಧಿಕಾರ ದಂಡ ಹೇರಿದ್ದನ್ನು ಸಮರ್ಥಿಸಿಕೊಂಡರು.