ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದುಕೊಂಡು ಮಹಾರಾಷ್ಟ್ರದ ಕೆಲವು ಪ್ರಮುಖ ರಾಜಕಾರಣಿಗಳು ವ್ಯಕ್ತಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾನೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ದಾವೂದ್ ಇಬ್ರಾಹಿಂ ಮಹಾರಾಷ್ಟ್ರದ ರಾಜಕಾರಣಿಗಳೊಂದಿಗೆ ನಿರಂತರವಾಗಿ ಸಂಪಕದಲ್ಲಿದ್ದಾನೆ ಎಂಬುದು ಕರಾಚಿಯಲ್ಲಿರುವ ಆತನ ಮನೆಯ ಫೋನ್ಗಳ ಕರೆಗಳ ಮಾಹಿತಿಯಿಂದ ತಿಳಿದು ಬಂದಿದೆ.
ಜತೆಗೆ ದಾವೂದ್ ಕುಟುಂಬಸ್ಥರು ಸಹ ಭಾರತದಲ್ಲಿರುವ ಪ್ರಮುಖರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಗುಜರಾತ್ನ ವಡೋದರಾ ಮೂಲದ ಹ್ಯಾಕರ್ ಮನೀಷ್ ಭಾಂಗ್ಲೆ ಮತ್ತು ಅವರ ಸ್ನೇಹಿತ ಜಯೇಶ್ ಶಾ ತಿಳಿಸಿದ್ದಾರೆ. ಇವರಿಬ್ಬರೂ ಪಾಕಿಸ್ತಾನ ಟೆಲಿಕಾಂ ಕಂಪನಿಯ ವೆಬ್ಸೈಟ್ ಹ್ಯಾಕ್ ಮಾಡಿ ಈ ಮಾಹಿತಿಯನ್ನು ಪಡೆದಿದ್ದಾರೆ.
ಕರಾಚಿಯಲ್ಲಿರುವ ದಾವೂದ್ ಮನೆಗೆ 4 ದೂರವಾಣಿ ಸಂಪರ್ಕ ಪಡೆಯಲಾಗಿದೆ. ಎಲ್ಲಾ ಸಂಪರ್ಕಗಳನ್ನೂ ದಾವೂದ್ ಮಡದಿ ಮೆಹಜಬೀನ್ ಶೇಖ್ ಹೆಸರಿನಲ್ಲಿ ಪಡೆಯಲಾಗಿದೆ.
021-3587**19, -021-3587**39, -021-3587**99, -021-3587**99. ಇದನ್ನೂ ಭಾರತದ ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಗಳೂ ಸಹ ದೃಢಪಡಿಸಿದ್ದಾರೆ.
ಈ ಸಂಖ್ಯೆಗಳಿಂದ ಭಾರತದಲ್ಲಿರುವ ದೂರವಾಣಿ ಸಂಖ್ಯೆಗಳಿಗೆ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿರುವ 4 ನಂಬರ್ಗಳಿಗೆ ಸತತವಾಗಿ ಕರೆ ಮಾಡಲಾಗಿದೆ ಎಂದು ವರದಿ ಮಾಡಲಾಗಿದೆ.