ನವದೆಹಲಿ: ಸೇನಾ ಶಕ್ತಿಯಲ್ಲಿ ಅಮೆರಿಕ ಭಾರತಕ್ಕಿಂತ ಅಗ್ರಸ್ಥಾನದಲ್ಲಿರಬಹುದು. ಆದರೆ ಅಮೆರಿಕ ಸೇನಾ ಮುಖ್ಯಸ್ಥರಿಗಿಂತ ಭಾರತೀಯ ಸೇನಾ ಮುಖ್ಯಸ್ಥರು ಹೆಚ್ಚು ವೇತನ ಪಡೆಯುವ ಸಾಧ್ಯತೆಯಿದೆ.
7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಬಂದರೆ ಸೇನಾ ಮುಖ್ಯಸ್ಥರಿಗೆ ಈ ಲಾಭ ಸಿಗಲಿದೆ. ಅಮೆರಿಕ ಸೇನಾ ಮುಖ್ಯಸ್ಥರು ವಾರ್ಷಿಕ 1.81,500 ಡಾಲರ್(1,17 ಕೋಟಿ ರು.) ವೇತನ ಪಡೆಯುತ್ತಿದ್ದಾರೆ. ಭಾರತದಲ್ಲಿ ವಾಯುಪಡೆ, ಭೂಸೇನೆ ಹಾಗೂ ನೌಕಪಡೆಯ ಮುಖ್ಯಸ್ಥರಿಗೆ ತಲಾ 1,40,520 ಡಾಲರ್(91.33 ಲಕ್ಷ ರು.) ಸಂಬಳ ಪಾವತಿ ಮಾಡಲಾಗುತ್ತಿದ್ದು, ಏಳನೇ ವೇತನ ಆಯೋಗದ ಶಿಫಾರಸನ್ನು ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದರೆ ಇವರ ಸಂಬಂಳ 1,89,482 ಡಾಲರ್ ಗೆ(1.23 ಕೋಟಿ ರು.) ಏರಿಕೆಯಾಗಲಿದೆ.
ಈ ಪೈಕಿ ಇಂಗ್ಲೆಂಡ್ ನ ಸೇನಾ ಮುಖ್ಯಸ್ಥರು ಹೆಚ್ಚು ವಾರ್ಷಿಕ ಹೆಚ್ಚು ವೇತನ ಪಡೆಯುತ್ತಿದ್ದಾರೆ. ತನ್ನ ಸೇನಾ ಮುಖ್ಯಸ್ಥರಿಗೆ ಇಂಗ್ಲೆಂಡ್ ಪ್ರಸ್ತುತ 2,69,868 ಡಾಲರ್(1.75 ಕೋಟಿ ರು.) ಪಾವತಿ ಮಾಡುತ್ತಿದೆ.