ಐಆರ್ಎನ್ಎಸ್ಎಸ್ 1ಜಿ ಉಡಾವಣೆ, ಜನರಿಗೆ ವಿಜ್ಞಾನಿಗಳು ನೀಡಿದ ಉಡುಗೊರೆ: ಮೋದಿ
ಐಆರ್ಎನ್ಎಸ್ಎಸ್ 1ಜಿ ಉಪಗ್ರಹ ಉಡಾವಣೆ ಮಾಡಿದ ವಿಜ್ಞಾನಿಗಳ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಶ್ಲಾಘಿಸಿದ್ದಾರೆ...
ನವದೆಹಲಿ: ಐಆರ್ಎನ್ಎಸ್ಎಸ್ 1ಜಿ ಉಪಗ್ರಹ ಉಡಾವಣೆ ಮಾಡಿದ ವಿಜ್ಞಾನಿಗಳ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಶ್ಲಾಘಿಸಿದ್ದಾರೆ.
ಇಸ್ರೋ ಉಡಾಯಿಸಿದ ಐಆರ್ ಎನ್ ಎಸ್ಎಸ್ 1ಜಿ ಉಪಗ್ರಹ ಉಡಾವಣೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವೀಕ್ಷಿಸಿದ್ದು, ವಿಜ್ಞಾನಿಗಳ ಸಾಧನೆಯನ್ನು ಹೊಗಳಿದ್ದಾರೆ. ಅಲ್ಲದೆ, ಉಪಗ್ರಹ ಉಡಾವಣೆಯೊಂದು ವಿಜ್ಞಾನಿಗಳು ಜನರಿಗೆ ನೀಡಿರುವ ಉಡುಗೊರೆಯಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರವು ಸ್ಥಳೀಯ ತಂತ್ರಜ್ಞಾನದ ಮೂಲಕ ತನ್ನದೇ ದಾರಿಯನ್ನು ಕಂಡುಕೊಳ್ಳಲು ಇದು ಸಹಕಾರಿಯಾಗಲಿದೆ. ಜನರಿಗೆ ವಿಜ್ಞಾನಿಗಳು ನೀಡಿರುವ ದೊಡ್ಡ ಉಡುಗೊರೆ ಇದಾಗಿದೆ. ಇಂತಹ ಉಡುಗೊರೆ ನೀಡಿದ ವಿಜ್ಞಾನಿಗಳಿಗೆ ದೊಡ್ಡ ಧನ್ಯವಾದವನ್ನು ಹೇಳುತ್ತೇನೆಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.