ಬಿಜೆಪಿ ಶಾಸಕನಿಂದ ಹಲ್ಲೆಗೊಳಗಾಗಿ ಪ್ರಾಣ ತ್ಯಜಿಸಿದ್ದ ಪೊಲೀಸ್ ಕುದುರೆ ಶಕ್ತಿಮಾನ್ 
ದೇಶ

ಡೆಹ್ರಾಡೂನ್ ಪೆಟ್ರೋಲ್ ಪಂಪ್ ಗೆ ಶಕ್ತಿಮಾನ್ ಹೆಸರು

ಡೆಹ್ರಾಡೂನ್ ನಲ್ಲಿನ ಪೆಟ್ರೋಲ್ ಪಂಪ್ ಒಂದಕ್ಕೆ ಬಿಜೆಪಿ ಶಾಸಕನಿಂದ ಹಲ್ಲೆಗೊಳಗಾಗಿ ಪ್ರಾಣ ತ್ಯಜಿಸಿದ್ದ ಪೊಲೀಸ್ ಕುದುರೆ ಶಕ್ತಿಮಾನ್ ಹೆಸರನ್ನು ಇಡಲು ನಿರ್ಧರಿಸಲಾಗಿದೆ...

ಡೆಹ್ರಾಡೂನ್: ಡೆಹ್ರಾಡೂನ್ ನಲ್ಲಿನ ಪೆಟ್ರೋಲ್ ಪಂಪ್ ಒಂದಕ್ಕೆ ಬಿಜೆಪಿ ಶಾಸಕನಿಂದ ಹಲ್ಲೆಗೊಳಗಾಗಿ ಪ್ರಾಣ ತ್ಯಜಿಸಿದ್ದ ಪೊಲೀಸ್ ಕುದುರೆ ಶಕ್ತಿಮಾನ್ ಹೆಸರನ್ನು ಇಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತಂತೆ ಡೆಹ್ರಾಡೂನ್ ಹಿರಿಯ ಪೊಲೀಸ್ ಅಧಿಕಾರಿ ಸದಾನಂದ ಅವರು ಮಾಹಿತಿ ನೀಡಿದ್ದು, ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದ ಶಕ್ತಿಮಾನ್ ಹೆಸರನ್ನು ನೆನಪಿನ ಅಂಗವಾಗಿ ಪೆಟ್ರೋಲ್ ಪಂಪ್'ವೊಂದಕ್ಕೆ ಇಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮಾ.14 ರಂದು ಪ್ರತಿಭಟನೆಯೊಂದರಲ್ಲಿ ಬಿಜೆಪಿ ಶಾಸಕ ಗಣೇಶ್ ಜೋಶಿಯವರಿಂದ ಹಲ್ಲೆಗೊಳಗಾಗಿದ್ದ ಪೊಲೀಸ್ ಕುದುರೆ ಶಕ್ತಿಮಾನ್ ಕಾಲೊಂದನ್ನು ಕಳೆದುಕೊಂಡಿತ್ತು. ಇದರಂತೆ ಶಸ್ತ್ರಚಿಕಿತ್ಸೆಮಾಡಿ ಶಕ್ತಿಮಾನ್ ಗೆ ಕೃತಕ ಕಾಲನ್ನು ಒದಗಿಸಲಾಗಿತ್ತು. ಆದರೆ, ಸೋಂಕು ತೀವ್ರಗೊಂಡ ಕಾರಣ ಗುಣಮುಖವಾಗದೆ ಏ.21 ರಂದು ಕೊನೆಯುಸಿರೆಳೆದಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ