ದೇಶ

ಜೆಇಇ ಮುಖ್ಯ ಪರೀಕ್ಷೆಯಲ್ಲಿ ತೃಪ್ತಿ ತರದ ಅಂಕ: ವಿದ್ಯಾರ್ಥಿನಿ ಆತ್ಮಹತ್ಯೆ

Shilpa D

ಜೈಪುರ:  ಐಐಟಿ ಆಕಾಂಕ್ಷಿಯಾಗಿದ್ದ ವಿದ್ಯಾರ್ಥಿನಿ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಪಾಸಾಗಿದ್ದರೂ ಅದರಲ್ಲಿ ಬಂದಿರುವ ಅಂಕ ಸಮಾಧಾನ ತಂದಿಲ್ಲ ಎಂದು ಬರೆದಿಟ್ಟು ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೈಪುರದ ಕೋಟಾದಲ್ಲಿ ನಡೆದಿದೆ

ಕೀರ್ತಿ ತ್ರಿಪಾಠಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಎಂಜಿನಿಯರಿಂಗ್ ತನಗೆ ಇಷ್ಟವಿಲ್ಲ, ಐಐಟಿ ಪದವಿ ಬಳಿಕ ಖಗೋಳ ಭೌತಶಾಸ್ತ್ರಜ್ಞೆ ಆಗಬೇಕೆಂದು ಬಯಸಿದ್ದಾಗಿ ಆಕೆ ಪತ್ರದಲ್ಲಿ 5 ಪುಟಗಳ ಬರೆದಿದ್ದಾಳೆ. ತನ್ನ ನಿರ್ಧಾರದಿಂದ ಪೋಷಕರಿಗೆ ನೋವಾಗಿದ್ದು ತನ್ನನ್ನು ಕ್ಷಮಿಸಬೇಕೆಂದು ಮನವಿ ಮಾಡಿದ್ದಾಳೆ.

ಕೋಟಾದಲ್ಲಿ ಕೋಚಿಂಗ್ ಪಡೆದು ಸರಿಯಾದ ಅಂಕಗಳು ಲಭಿಸಿಲ್ಲ ಎಂಬ ಒತ್ತಡಕ್ಕೆ ಒಳಗಾಗಿ ಈ ವರ್ಷ ಆತ್ಮಹತ್ಯೆ ಮಾಡಿಕೊಂಡ ಕೋಚಿಂಗ್ ವಿದ್ಯಾರ್ಥಿಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿತ್ತು. ಅದರಲ್ಲಿ  144 ಅಂಕ ಬಂದಿತ್ತು. ಮುಂದಿನ ಕೋರ್ಸ್‌ಗಳಿಗೆ ಈ ಪರೀಕ್ಷೆಯ ಅಂಕ ಪರಿಗಣನೆ 100ಕ್ಕೆ ನಿಗದಿಯಾಗಿದೆ. ಕೀರ್ತಿಗೆ ಸುಲಭವಾಗಿ ಐಐಟಿಯಲ್ಲಿ ಪ್ರವೇಶ ಪಡೆಯುವ ಅವಕಾಶವಿತ್ತು, ಆದರೆ ಆತುರದ ನಿರ್ಧಾರ ಕೈಗೊಂಡು ಅನಾಹುತ ಮಾಡಿಕೊಂಡಿದ್ದಾಳೆ ಎಂದು ಕೋಚಿಂಗ್ ಅಧಿಕಾರಿಗಳು ಹೇಳಿದ್ದಾರೆ.  

SCROLL FOR NEXT