ದೇಶ

ಎಲೆಕ್ಟ್ರಾನಿಕ್ ಮಾಧ್ಯಮ ಕುರಿತ ಮಲ್ಯ ಹೇಳಿಕೆ ಒಂದು ಮೆಚ್ಚುಗೆ: ಬಿಇಎ ಕಾರ್ಯದರ್ಶಿ

Lingaraj Badiger
ಘಾಜಿಯಾಬಾದ್: ಸರ್ಕಾರವನ್ನು ಕೆರಳಿಸುವಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬ ಮದ್ಯದ ದೊರೆ ವಿಜಯ್ ಮಲ್ಯ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಸಾರ ಸಂಪಾದಕರ ಸಂಘ(ಬಿಇಎ)ದ ಕಾರ್ಯದರ್ಶಿ ಎನ್.ಕೆ.ಸಿಂಗ್ ಅವರು, ಅವರ ಹೇಳಿಕೆಯನ್ನು ತಾವು ಒಂದು ಮೆಚ್ಚುಗೆಯಾಗಿ ಸ್ವೀಕರಿಸುವುದಾಗಿ ಶುಕ್ರವಾರ ಹೇಳಿದ್ದಾರೆ.
'ಮಾಧ್ಯಮ ತನ್ನ ಕೆಲಸವನ್ನು ಮಾಡುತ್ತಿದೆ. ಹೀಗಾಗಿ ನಾನು ಅವರ ಹೇಳಿಕೆಯನ್ನು ಒಂದು ಮೆಚ್ಚುಗೆಯಾಗಿ ಸ್ವೀಕರಿಸುತ್ತೇನೆ. ಒಂದು ವೇಳೆ ವಿಜಯ್ ಮಲ್ಯ ಅವರು ಪ್ರಜಾಪ್ರಭುತ್ವದ ಸೂಕ್ಷ್ಮತೆಗಳನ್ನು ಅರಿತುಕೊಂಡಿದ್ದರೆ, ಮಾಧ್ಯಮ ಎತ್ತಿದ ವಿಷಯಗಳನ್ನು ಅವರು ತಿಳಿದುಕೊಳ್ಳಲಿ. ಮಾಧ್ಯಮ ಯಾವತ್ತೂ ಸಾರ್ವಜನಕರಲ್ಲಿ ಅರಿವು ಮೂಡಿಸುತ್ತದೆ' ಎಂದು ಸಿಂಗ್ ಹೇಳಿದ್ದಾರೆ.
ಸಂದರ್ಶನವೊಂದಲ್ಲಿ ವಿಜಯ್ ಮಲ್ಯ, ಇವತ್ತು ಭಾರತದಲ್ಲಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳವುದು ಬಹಳ ಮುಖ್ಯ. ಎಲೆಕ್ಟ್ರಾನಿಕ್ ಮಾಧ್ಯಮಗಳು ಸಾರ್ವಜನಿಕರು ಅಭಿಪ್ರಾಯವನ್ನು ಹೇಳುವುದಷ್ಟೆ ಅಲ್ಲದೆ ಸರ್ಕಾರ ಕ್ರಮ ಕೈಗೊಳ್ಳಲು ಪ್ರಚೋದನೆ ನೀಡುತ್ತಿವೆ ಎಂದು ಆರೋಪಿಸಿದ್ದರು.
ಇದೇ ವೇಳೆ ವಿಜಯ್ ಮಲ್ಯ ಅವರು ಮೊದಲು ಭಾರತಕ್ಕೆ ಬಂದು ಜಾರಿ ನಿರ್ದೇಶನಾಲಯದ ಮಂದೆ ವಿಚಾರಣೆಗೆ ಹಾಜರಾಗಲಿ ಎಂದು ಎನ್.ಕೆ.ಸಿಂಗ್ ಹೇಳಿದ್ದಾರೆ.
SCROLL FOR NEXT