ದೇಶ

ಆಗಸ್ಟಾ ಹಗರಣ: ಸಿಬಿಐಯಿಂದ ಐಎಎಫ್ ಮಾಜಿ ಉಪ ಮುಖ್ಯಸ್ಥನ ವಿಚಾರಣೆ

Lingaraj Badiger
ನವದೆಹಲಿ: ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದಲ್ಲಿ ವಾಯುಪಡೆಯ ಮಾಜಿ ಉಪ ಮುಖ್ಯಸ್ಥ ಜೆ.ಎಸ್ ಗುಜ್ರಾಲ್ ಅವರನ್ನು ಶನಿವಾರ ಸಿಬಿಐ ತೀವ್ರ ವಿಚಾರಣೆಗೊಳಪಡಿಸಿದೆ.
ಹಗರಣಕ್ಕೆ ಸಂಬಂಧಿಸಿದಂತೆ 3,600 ಕೋಟಿ ರುಪಾಯಿ ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನಿವೃತ್ತಿ ಏರ್ ಮಾರ್ಷೆಲ್ ಗುಜ್ರಾಲ್ ಅವರನ್ನು ಸಿಬಿಐ ಪ್ರಧಾನ ಕಚೇರಿಯಲ್ಲಿ ಇಂದು ವಿಚಾರಣೆ ಒಳಪಡಿಸಲಾಗಿದೆ.
2005ರಲ್ಲಿ  ಆಗಸ್ಟಾ ವೆಸ್ಟ್ ಲ್ಯಾಂಡ್ ಕಾಪ್ಟರ್ ಖರೀದಿಗೆ ಸಂಬಂಧ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಗುಜ್ರಾಲ್ ಸಹ ಭಾಗವಹಿಸಿದ್ದರು.
ಇನ್ನು ಹೆಲಿಕಾಪ್ಟರ್ ಹಗರಣ ಸಂಬಂಧ ಮತ್ತೊಬ್ಬ ಪ್ರಮುಖ ಆರೋಪಿ ವಾಯುಪಡೆ ಮಾಜಿ ಮುಖ್ಯಸ್ಥ ಎಸ್. ಪಿ. ತ್ಯಾಗಿ ಅರಿಗೂ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿದೆ. 
ಹಗರಣ ಸಂಬಂಧ ಇಟಲಿ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಇದೇ ಮೊದಲ ಬಾರಿಗೆ ತ್ಯಾಗಿ ಅವರು ಸಿಬಿಐನಿಂದ ತನಿಖೆ ಎದುರಿಸುತ್ತಿದ್ದಾರೆ. ಇಟಲಿ ನ್ಯಾಯಾಲಯದ ತೀರ್ಪಿನಲ್ಲಿ ತ್ಯಾಗಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಸೇರಿದಂತೆ ಘಾಟಾನುಘಟಿ ನಾಯಕ ಹೆಸರುಗಳು ಉಲ್ಲೇಖವಾಗಿದೆ ಎಂಬ ವರದಿಗಳು ಪ್ರಸಾರವಾದ ಹಿನ್ನಲೆಯಲ್ಲಿ ತ್ಯಾಗಿ ಅವರ ಸಿಬಿಐ ವಿಚಾರಣೆ ತೀವ್ರ ಕುತೂಹಲ ಕೆರಳಿಸಿದೆ.
SCROLL FOR NEXT