ದೇಶ

ಮುಂದಿನ ಅವಧಿಗೂ ಮೋದಿಯೇ ಪ್ರಧಾನಿಯಾಗಿರಬೇಕು: ಸಮೀಕ್ಷೆಯಲ್ಲಿ ಶೇ.70 ರಷ್ಟು ಜನರ ಅಭಿಪ್ರಾಯ

Srinivas Rao BV

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳಾಗುತ್ತಿದ್ದು, ಇನ್ನು ಮೂರು ವರ್ಷ ಕಳೆದ ಬಳಿಕ( ಮುಂದಿನ ಚುನಾವಣೆ) ಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವೇ ಅಸ್ತಿತ್ವಕ್ಕೆ ಬರಬೇಕೆಂದು   ದೇಶದ ಶೇ.70 ರಷ್ಟು ಜನರು ಅಭಿಪ್ರಾಯಯಪಟ್ಟಿದ್ದಾರೆ.
ಎನ್ ಡಿಎ ಸರ್ಕಾರಕ್ಕೆ ಎರಡು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮ ಅಧ್ಯಯನ ಕೇಂದ್ರವೊಂದು ಸಮೀಕ್ಷೆ ನಡೆಸಿದ್ದು,  2024 ರ ವರೆಗೂ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿರಬೇಕು ಎಂದು ಶೇ.70 ರಷ್ಟು ಜನರು ಹೇಳಿದ್ದಾರೆ. ಇನ್ನು ಶೇ. 62 ರಷ್ಟು ಜನರು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಬಗ್ಗೆ ತೃಪ್ತಿ ಹೊಂದಿದ್ದಾರೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
ನರೇಂದ್ರ ಮೋದಿ ಪ್ರಧಾನಿಯಾದ ನಂತರವೂ ದೇಶದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಶೇ.50 ರಷ್ಟು ಜನರು ಅಭಿಪ್ರಾಯಪಟ್ಟಿದ್ದರೆ, ಶೇ.15 ರಷ್ಟು ಮಂದಿ ಮೋದಿ ಪ್ರಧಾನಿಯಾದ ಬಳಿಕ ದೇಶದ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಹೇಳಿದ್ದಾರೆ. ಶೇ. 43 ರಷ್ಟು ಮಂದಿ ತಮಗೆ ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.   
15 ರಾಜ್ಯಗಳ ಗ್ರಾಮೀಣ, ನಗರ ಪ್ರದೇಶಗಳಿಂದ ಸುಮಾರು 4,000 ಜನರನ್ನು ಸಮೀಕ್ಷೆಗೊಳಪಡಿಸಿ ವರದಿ ಸಿದ್ಧಪಡಿಸಲಾಗಿದೆ. ಪ್ರಧಾನಿ ಮೋದಿ ಸಂಪುಟ ಸಹೋದ್ಯೋಗಿಗಳಾದ ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ಸುರೇಶ್ ಪ್ರಭು, ಮನೋಹರ್ ಪರಿಕ್ಕರ್, ಅರುಣ್ ಜೇಟ್ಲಿ ಕಾರ್ಯವೈಖರಿ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ರಾಮ್ ವಿಸಾಲ್ ಪಾಸ್ವಾನ್, ಬಂಡಾರು ದತ್ತಾತ್ರೇಯ, ಜೆಪಿ ನಡ್ಡ, ಪ್ರಕಾಶ್ ಜಾವ್ದೇಕರ್, ರಾಧಾ ಮೋಹನ್ ಸಿಂಗ್ ಅವರ ಕಾರ್ಯವೈಖರಿ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

SCROLL FOR NEXT