ನವದೆಹಲಿ: ಭಯೋತ್ಪಾದಕ ಸಂಘಟನೆ ಐಸಿಸ್ ಸೇರಲು ತೆರಳುತ್ತಿದ್ದ 28 ವರ್ಷದ ಬಿಹಾರದ ಮಹಿಳೆಯನ್ನು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಯಾಸ್ಮಿನ್ ಮೊಹಮ್ಮದ್ ಎಂಬ ಮಹಿಳೆ ತನ್ನ 5 ವರ್ಷದ ಮಗನೊಂದಿಗೆ ಆಫ್ಘಾನಿಸ್ತಾನದ ಕಾಬೂಲ್ಗೆ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಆಕೆ ಕಾಬೂಲ್ ಮೂಲಕ ಕೇರಳದಿಂದ ನಾಪತ್ತೆಯಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳಿದ್ದಾರೆ ಎನ್ನಲಾಗುತ್ತಿರುವ ಯುವಕರನ್ನು ಭೇಟಿ ಮಾಡಲು ತೆರಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳಯ ಯಾಸ್ಮಿನ್ನನ್ನು ಬಂಧಿಸಿ ನಂತರ ಆಕೆಯನ್ನು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಕೇರಳ ಪೊಲೀಸರ ತಂಡ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಕೇರಳ ಯುವಕರ ನಾಪತ್ತೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಬ್ದುಲ್ ರಷೀದ್ ಎಂಬಾತನೊಂದಿಗೆ ಯಾಸ್ಮಿನ್ ಸಂಪರ್ಕ ಹೊಂದಿದ್ದಳು ಎಂದು ಹೇಳಲಾಗಿದೆ.