ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 1 ರೂಪಾಯಿ 93 ಪೈಸೆ ಏರಿಕೆ

ಸಬ್ಸಿಡಿ ಅಡುಗೆ ಅನಿಲದ ಬೆಲೆ ಪ್ರತಿ ಸಿಲಿಂಡರ್ ಗೆ 1ರೂಪಾಯಿ 93 ಪೈಸೆ ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ...

ಸಾಂದರ್ಭಿಕ ಚಿತ್ರ
Sumana Upadhyaya
Updated On : 2 Aug 2016, 10:27 am
ನವದೆಹಲಿ: ಸಬ್ಸಿಡಿ ಅಡುಗೆ ಅನಿಲದ ಬೆಲೆ ಪ್ರತಿ ಸಿಲಿಂಡರ್ ಗೆ 1ರೂಪಾಯಿ 93 ಪೈಸೆ ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ಇದು ಎರಡನೇ ಬಾರಿ ಅಡುಗೆ ಅನಿಲದ ಬೆಲೆ ಏರಿಕೆಗೊಂಡಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಸಬ್ಸಿಡಿ ಸಿಲಿಂಡರ್ ಗಳ ವಿತರಣೆಯನ್ನು ಕಡಿತಗೊಳಿಸಲು ಮುಂದಾಗಿದೆ.
ಈ ಬಾರಿ ಬೆಲೆ ಹೆಚ್ಚಳದ ನಂತರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ತೂಕದ ಸಬ್ಸಿಡಿ ಸಿಲಿಂಡರ್ ಬೆಲೆ 421 ರೂಪಾಯಿ 16 ಪೈಸೆಯಷ್ಟಾಗಿದೆ.  
ಬೆಂಗಳೂರಿನಲ್ಲಿ ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 428 ರೂಪಾಯಿ 50 ಪೈಸೆಯಷ್ಟಾಗಿದೆ.

Advertisement

Advertisement

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿನ ವ್ಯತ್ಯಾಸದಂತೆ ಮೊನ್ನೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡಿದ್ದ ಕೇಂದ್ರ ಸರ್ಕಾರ ಎಲ್ ಪಿಜಿ ಬೆಲೆ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಸ್ವಲ್ಪ ಶಾಕ್ ನೀಡಿದೆ.
ಅದೇ ರೀತಿ ಕೇಂದ್ರ ಸರ್ಕಾರ ದೇಶೀಯ ತೈಲ ಕಂಪೆನಿಗಳಿಗೆ 10 ತಿಂಗಳವರೆಗೆ ಪ್ರತಿ ತಿಂಗಳು 25 ಪೈಸೆಯಂತೆ ಸೀಮೆಎಣ್ಣೆ ಬೆಲೆಯನ್ನು ಹೆಚ್ಚಿಸಲು ಸೂಚಿಸಿದೆ. ಅದರಂತೆ ಕಳೆದ ತಿಂಗಳು ಮೊದಲ ಬಾರಿಗೆ 25 ಪೈಸೆ ಹೆಚ್ಚಳವಾಗಿದ್ದ ಸೀಮೆ ಎಣ್ಣೆ ಬೆಲೆ ನಿನ್ನೆ ಮತ್ತೆ 25 ಪೈಸೆಯಷ್ಟು ಹೆಚ್ಚಾಗಿದೆ. ಒಂದು ಲೀಟರ್ ಸೀಮೆಎಣ್ಣೆ ಬೆಲೆ ರಾಜಧಾನಿ ದೆಹಲಿಯಲ್ಲಿ 15 ರೂಪಾಯಿ 46 ಪೈಸೆಯಷ್ಟಾಗಿದೆ.
ಇದೇ ಸಂದರ್ಭದಲ್ಲಿ ತೈಲ ನಿಗಮಗಳು ಸಬ್ಸಿಡಿರಹಿತ ಸಿಲಿಂಡರ್ ಗಳ ಬೆಲೆಯನ್ನು 50 ರೂಪಾಯಿ 5 ಪೈಸೆಯಷ್ಟು ಕಡಿತಗೊಳಿಸಿದೆ. ಸಬ್ಸಿಡಿರಹಿತ ಸಿಲಿಂಡರ್ ಗಳ ಬೆಲೆ ದೆಹಲಿಯಲ್ಲಿ ಇದೀಗ 14.2 ಕೆಜಿಯದ್ದಕ್ಕೆ 487 ರೂಪಾಯಿಯಷ್ಟಾಗಿರುತ್ತದೆ. ಬೆಂಗಳೂರಿನಲ್ಲಿ ಸಬ್ಸಿಡಿರಹಿತ ಸಿಲಿಂಡರ್ ಗಳ ಬೆಲೆ 546 ರೂಪಾಯಿ 50 ಪೈಸೆಯಷ್ಟಾಗಿರುತ್ತದೆ. ಈ ಮಧ್ಯೆ ಟರ್ಬೈನ್ ಇಂಧನದ ಬೆಲೆ 4 ರೂಪಾಯಿ 2 ಪೈಸೆಯಷ್ಟು ಕಡಿತಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments