ಬಾಹುಬಲಿ-2 ಚಿತ್ರದ ಚಿತ್ರೀಕರಣದಲ್ಲಿ ನಟ ಪ್ರಭಾಸ್ ಹಾಗೂ ಚಿತ್ರತಂಡ (ಟ್ವಿಟರ್ ಚಿತ್ರ) 
ದೇಶ

ಬಾಹುಬಲಿ-2 ಕ್ಲೈಮ್ಯಾಕ್ಸ್ ಯುದ್ಧಕ್ಕೆ ಭರ್ಜರಿ ಸಿದ್ಧತೆ!

ಭಾರತೀಯ ಚಿತ್ರರಂಗದಲ್ಲೇ ತನ್ನ ಮೇಕಿಂಗ್ ನಿಂದ ಭಾರಿ ಸದ್ದು ಮಾಡಿದ್ದ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ತನ್ನ ಎರಡನೇ ಭಾಗದ ಮೂಲಕವೂ ಕೂಡ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲೇ ತನ್ನ ಮೇಕಿಂಗ್ ನಿಂದ ಭಾರಿ ಸದ್ದು ಮಾಡಿದ್ದ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ತನ್ನ ಎರಡನೇ ಭಾಗದ ಮೂಲಕವೂ ಕೂಡ  ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

ಬಾಹುಬಲಿ ಮೊದಲ ಭಾಗದ ಅಭೂತ ಪೂರ್ವ ಯಶಸ್ಸಿನಿಂದ ಸಾಕಷ್ಟು ಉತ್ತೇಜಿತರಾಗಿರುವ ನಿರ್ದೇಶಕ ಎಸ್ ಎಸ್ ರಾಜಮೌಳಿ ಅದೇ ಹುಮ್ಮಸ್ಸಿನಲ್ಲಿ ಎರಡನೇ ಭಾಗದ ಚಿತ್ರೀಕರಣ ಹಾಗೂ  ಅದರ ಪ್ರಮೋಷನ್ ಕುರಿತಂತೆ ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಈ ನಡುವೆ ಚಿತ್ರದ ಕ್ಲೈಮ್ಯಾಕ್ಸ್ ಗೆ ಭಾರಿ ಪ್ರಮಾಣದ ಸೆಟ್ ಗಳು ಹಾಗೂ ದುಬಾರಿ ವೆಚ್ಚದ ಪರಿಕರಗಳನ್ನು ಬಳಕೆ  ಮಾಡಿಕೊಳ್ಳಲಾಗುತ್ತಿದೆ. ಚಿತ್ರೀಕರಣಕ್ಕೆ ನಿರ್ಮಾಪಕರು ಭಾರಿ ಪ್ರಮಾಣದಲ್ಲಿ ಬಂಡವಾಳ ತೊಡಗಿಸಿದ್ದು, ಮೂಲಗಳ ಪ್ರಕಾರ ಕೇವಲ ಈ ಕ್ಲೈಮ್ಯಾಕ್ಸ್ ಯುದ್ಧದ ಚಿತ್ರೀಕರಣಕ್ಕೆಂದೇ ಬರೊಬ್ಬರಿ  30 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಈಗಾಗಲೇ ಬಾಹುಬಲಿ-2 ಚಿತ್ರದ ಶೇ.60ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದ್ದು, ಎರಡನೇ ಭಾಗದ ಕ್ಲೈಮ್ಯಾಕ್ಸ್ ಯುದ್ಧದ ಚಿತ್ರೀಕರಣ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರದಿಂದ ಸಾಗಿದೆ. ಕಳೆದ  ಜೂನ್ 13ರಿಂದಲೇ ಕ್ಲೈಮ್ಯಾಕ್ಸ್ ಯುದ್ಧದ ಚಿತ್ರೀಕರಣ ಆರಂಭವಾಗಿದ್ದು, ನಟ ಪ್ರಭಾಸ್, ರಾಣಾ ದಗ್ಗುಬಾಟಿ ಹಾಗೂ ತಮ್ಮನ್ನಾ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಯುದ್ಧ  ಸನ್ನಿವೇಶಗಳಿಗಾಗಿಯೇ ಅಂತಾರಾಷ್ಟ್ರೀಯ ಮಟ್ಟದ ನುರಿತ ಕಲಾವಿದರು ಕೆಲಸ ಮಾಡುತ್ತಿದ್ದು, ವಿದೇಶಿ ನುರಿತ ತಂತ್ರಜ್ಞರು ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ ಎಂದು ಚಿತ್ರ  ನಿರ್ಮಾಪಕ ಶೋಭು ಯರ್ಲಗಡ್ಡ ಅವರು ತಿಳಿಸಿದ್ದಾರೆ.

ಒಟ್ಟಾರೆ ತನ್ನ ಮೇಕಿಂಗ್ ನಿಂದಲೇ ಭಾರಿ ಸದ್ದು ಮಾಡಿದ್ದ ಬಾಹುಬಲಿ ಚಿತ್ರ ತಂಡ ಎರಡನೇ ಭಾಗದಲ್ಲಿ ಅದೇ ಕುತೂಹಲವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ