ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ 
ದೇಶ

ಪಂಜಾಬ್ ವಿಧಾನಸಭೆ ಚುನಾವಣೆ: ಆಪ್ ನಿಂದ 19 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಮುಂದಿನ ವರ್ಷದ ಆರಂಭದಲ್ಲೇ ನಡೆಯುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸಿರುವ ಆಮ್ ಆದ್ಮಿ...

ನವದೆಹಲಿ: ಮುಂದಿನ ವರ್ಷದ ಆರಂಭದಲ್ಲೇ ನಡೆಯುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸಿರುವ ಆಮ್ ಆದ್ಮಿ ಪಕ್ಷ ಗುರುವಾರ 19 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಹಿರಿಯ ವಕೀಲರಾದ ಎಚ್.ಎಸ್. ಫೂಲ್ಕ್, ಹಿಮಂತ್ ಸಿಂಗ್ ಹಾಗೂ ಕಳೆದ ಜೂನ್ ನಲ್ಲಿ ಎಎಪಿ ಸೇರ್ಪಡೆಯಾದ ಮಾಜಿ ಬಿಎಸ್ ಪಿ ಸಂಸದ ಎಂ.ಪಿ.ಮೋಹನ್ ಸಿಂಗ್ ಅವರು ಆಪ್ ಇಂದು ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಲೂಧಿಯಾನದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಫೂಲ್ಕ್ ಅವರು ಈಗ ದಾಖದಿಂದ ವಿಧಾಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಹಿರಿಯ ವಕೀಲರಾಗಿರುವ ಫೂಲ್ಕ್ ಅವರು 1984ರ ಸಿಖ್ ವಿರೋಧಿ ದಂಗೆಯ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಹೋರಾಟ ನಡೆಸಿದ್ದರು. ಅಲ್ಲದೆ ಪಂಜಾಬ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ರೇಸ್ ನಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ISIS ಉಗ್ರ ಸಂಘಟನೆಗೆ ಭಾರೀ ಹೊಡೆತ: ಅಮೆರಿಕಾ-ನೈಜೀರಿಯಾ ಜಂಟಿ ಕಾರ್ಯಾಚರಣೆಯಲ್ಲಿ ಉನ್ನತ ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಹತ್ಯೆ..!

ಮಧ್ಯಪ್ರಾಚ್ಯ ಸಂಘರ್ಷ: ಅಮೆರಿಕಾ ನಂಬಿಕೆಗೆ ಅರ್ಹವಲ್ಲ, ಭಾರತ ಬಂದರೆ ಶಾಂತಿ ಸಾಧ್ಯ; ಇರಾನ್

BLR Airport : ಮತ್ತೊಂದು ಮೈಲಿಗಲ್ಲು ಸಾಧಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ!

ಇರಾನ್ ಅಣ್ವಸ್ತ್ರ ಹೊಂದಬಾರದು, ಹಾರ್ಮುಜ್ ಜಲಸಂಧಿ ಮುಕ್ತವಾಗಿರಬೇಕು: ಅಮೆರಿಕಾ ನಿಲುವಿಗೆ ಚೀನಾ ಸಹಮತ

NEET ರದ್ದು: 650 ಅಂಕ ನಿರೀಕ್ಷಿಸಿದ್ದ ವಿದ್ಯಾರ್ಥಿ ನೇಣಿಗೆ ಶರಣು; ‘ಭ್ರಷ್ಟ ವ್ಯವಸ್ಥೆಯೇ ಕಾರಣ’- ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ

SCROLL FOR NEXT