ದೇಶ

ಮೋದಿ ಸರ್ಕಾರ ಪ್ರಜಾಪ್ರಭುತ್ವಕ್ಕೆ ಧಕ್ಕೆ: ಆಪ್ ನಾಯಕ ಸಂಜಯ್ ಸಿಂಗ್

Sumana Upadhyaya
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ' ಪ್ರಜಾಪ್ರಭುತ್ವ ಮತ್ತು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಿದೆ' ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ದೆಹಲಿ, ಅರುಣಾಚಲ ಪ್ರದೇಶ, ಉತ್ತರಾಖಂಡ ಮತ್ತು ಇತ್ತೀಚಿನ ಪುದುಚೆರಿಯ ರಾಜಕೀಯ ವ್ಯವಸ್ಥೆಯನ್ನು ನೋಡಿದಾಗ ಮೋದಿಯವರಿಗೆ ನಮ್ಮ ದೇಶದ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ ಎಂಬುದು ಗೊತ್ತಾಗುತ್ತದೆ ಎಂದು ಆಪ್ ನಾಯಕ ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಅವರು ತಮ್ಮ ಬಲದಿಂದ ಸರ್ಕಾರವನ್ನು ನಡೆಸಲು ಬಯಸುತ್ತಿದ್ದಾರೆ ಎಂದರು.
ಗವರ್ನರ್ ಮತ್ತು ಲೆಫ್ಟಿನೆಂಟ್ ಗವರ್ನರ್ ಹುದ್ದೆಗಳನ್ನು ದುರುಪಯೋಗಪಡಿಸಿಕೊಳ್ಳುವ ವಿಷಯವನ್ನು ತುರ್ತಾಗಿ ಸಂಸತ್ತಿನಲ್ಲಿ ಚರ್ಚಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಸತ್ತಿನಲ್ಲಿ ಈ ವಿಷಯ ಕುರಿತು ಚರ್ಚೆ ನಡೆಸಿ ಪರಿಣಾಮಕಾರಿಯಾದ ಕಾನೂನನ್ನು ಜಾರಿಗೆ ತರಬೇಕು. ಹಾಗೆ ಮಾಡಿದರೆ ಯಾವುದೇ ಚುನಾಯಿತ ಸರ್ಕಾರವನ್ನು ಹೊಡೆದುರುಳಿಸಲು ಗವರ್ನರ್ ಮತ್ತು ಲೆಫ್ಟಿನೆಂಟ್ ಗವರ್ನರ್ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸಿಂಗ್ ಹೇಳಿದರು.
ಕಿರಣ್ ಬೇಡಿ ವಾಟ್ಸಾಪ್ ನಲ್ಲಿ ಆದೇಶ ಹೊರಡಿಸುತ್ತಾರೆ. ಅಧಿಕಾರಿಗಳನ್ನು ಕರೆದು ತಮ್ಮ ಆದೇಶವನ್ನು ಪಾಲಿಸುವಂತೆ ಹೇಳುತ್ತಾರೆ. ದೆಹಲಿ ಗವರ್ನರ್ ನಜೀಬ್ ಜಂಗ್ ಅವರಂತೆ ಕಿರಣ್ ಬೇಡಿ ಕೂಡ ವರ್ತಿಸುತ್ತಿದ್ದಾರೆ ಎಂದರು.
SCROLL FOR NEXT