ಸಂವಾದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ
ನವದೆಹಲಿ: ಮೈ ಗೌ(ನನ್ನ ಸರ್ಕಾರ)' ವೆಬ್ ಪೋರ್ಟಲ್ ಆರಂಭಿಸಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಮಾದರಿಯ ಟೌನ್ ಹಾಲ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಂದಿಗೆ ಬಹಿರಂಗವಾಗಿ ಸಂವಾದ ನಡೆಸಿದರು.
ಇದೇ ವೇಳೆ ಪ್ರಧಾನಿಮಂತ್ರಿಗಳ ವೆಬ್‌ಸೈಟ್‌ನೊಂದಿಗೆ ಸಂಪರ್ಕ ಸಾಧಿಸುವ "ಪಿಎಂಒ' ಆ್ಯಪ್ ಅನ್ನು ಸಹ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.
ಆಪ್ ಬಿಡುಗಡೆ ಮಾಡಿದ ಬಳಿಕ ದೆಹಲಿಯ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ಕೆಲವು ಆಯ್ದ ಸಾರ್ವಜನಿಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಮಾತನಾಡಿದ ಮೋದಿ, ದೇಶದ ಅಭಿವೃದ್ಧಿಗೆ ಉತ್ತಮ ತಂತ್ರಜ್ಞಾನ ಅಗತ್ಯ. ಹೊಣೆಗಾರಿಕೆ ಉತ್ತಮ ಸರ್ಕಾರದ ಗುರಿಯಾಗಿದೆ. ಪ್ರಜಾಪ್ರಭುತ್ವ ಕೇವಲ ಮತ ಚಲಾಯಿಸಲು ಮಾತ್ರ ಅಲ್ಲ. ದೇಶದ ಅಭಿವೃದ್ಧಿಗೆ ಉತ್ತಮ ಆಡಳಿತದ ಅಗತ್ಯವಿದೆ. ಉತ್ತಮ ಆಡಳಿತ ಎಂದರೆ ಅಭಿವೃದ್ಧಿ ಎಂದರ್ಥ ಎಂದರು.
ಪಿಎಂಒ ಆಪ್ ಅನ್ನು 6 ಮಂದಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದು, ಇವರು ದೆಹಲಿ ಟೆಕ್ನಿಕಲ್ ಯೂನಿರ್ವಸಿಟಿಯ ವಿದ್ಯಾರ್ಥಿಗಳಾಗಿದ್ದಾರೆ.