ವಿನೀತಾ ಕುಮಾರಿ 
ದೇಶ

ಟೀಚರ್ ಹೊಡೆದಿದ್ದಕ್ಕೆ ಮನನೊಂದು 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

9ನೇ ತರಗತಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ನಲ್ಲಿ ನಡೆದಿದೆ....

ವಿಲ್ಲುಪುರಂ: 9ನೇ ತರಗತಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ನಲ್ಲಿ ನಡೆದಿದೆ.

ಅರಳುವಾಡಿ ಗ್ರಾಮದ ಅಲ್ಲಿಮಟ್ಟು ಮತ್ತು ರಾಜಕುಮಾರಿ ಅವರ ಪುತ್ರಿ ವಿನಿತಾ, ಅನ್ನಿಯೂರು ಸರ್ಕಾರಿ ಶಾಲೆಯ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕಳೆದ ವಾರಾಂತ್ಯದಲ್ಲಿ ತನ್ನ ಮನೆಗೆ ಹೋಗಿದ್ದ ವಿನಿತಾ ಸೋಮವಾರ ವಾಪಸ್ ಶಾಲೆಗೆ ತೆರಳಿರಲಿಲ್ಲ, ಮರುದಿನ ಕೂಡ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವಿನಿತಾ ಬುಧವಾರ ಕೂಡ ಶಾಲೆಗೆ ಹೋಗಿರಲಿಲ್ಲ, ಹಾಸ್ಟೆಲ್ ವಾರ್ಡನ್ ಆರ್. ವಿಜಯಲಕ್ಷ್ಮಿ ವಿನಿತಾ ಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು.

ಶಾಲೆಗೆ ಬಂದ ವಿನಿತಾ ಹೊಟ್ಟೆನೋವಿನಿಂದ ಬಳಲುತ್ತಿದ್ದುದ್ದಾಗಿ ತಮಿಳು ಭಾಷೆ ಟೀಚರ್ ಬಳಿ ಹೇಳಿಕೊಂಡಿದ್ದಳು. ಈ ವೇಳೆ ಕೋಪಗೊಂಡ ಟೀಚರ್ ಆಕೆಯ ಹೊಟ್ಟೆಮೇಲೆ ಹೊಡೆದಿದ್ದರು ಎಂದು ತನ್ನ ಬಳಿ ಹೇಳಿಕೊಂಡಿದ್ದಳು ಎಂದು ವಿನೀತಾ ಸಹೋದರ ನವೀನ್ ಕುಮಾರ್ ಹೇಳಿದ್ದಾನೆ.

ಟೀಚರ್ ವರ್ತನೆಯಿಂದ ಬೆದರಿದ್ದ, ವಿನೀತಾ ವಾಪಸ್ ಮನೆಗೆ ಹೋಗದೇ ಅಪ್ಪ ಅಮ್ಮ ಬೇಜಾರು ಮಾಡಿಕೊಳ್ಳುತ್ತಾರೆ ಎಂದು ಸಾವಿಗೆ ಶರಣಾಗಿದ್ದಾಳೆ ಎಂದು ನವೀನ್ ಕುಮಾರ್ ಪೊಲೀಸರಿಗೆ ತಿಳಿಸಿದ್ದಾನೆ.

ವಿನೀತಾ ರೂಮ್ ಮೇಟ್ ಬೆಳಗಿನ ಬ್ರೇಕ್ ವೇಳೆ ಶಾಲೆಯಿಂದ ವಾಪಸ್ ಹಾಸ್ಟೆಲ್ ಗೆ ಬಂದಾಗ ವಿನಿತಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಹಾಸ್ಟೆಲ್ ಸಿಬ್ಬಂದಿ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ.

ವಿನಿತಾ ಸಹೋದರ ಮಾಡಿರುವ ಆರೋಪವನ್ನು ಶಾಲಾ ಸಿಬ್ಬಂದಿ ನಿರಾಕರಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾಸ್ಟೆಲ್ ಮತ್ತು ಶಾಲಾ ಸಿಬ್ಬಂದಿ ತಮ್ಮ ಮಗಳ ಸಾವಿನ ಸುದ್ದಿಯನ್ನು ಸೋಮವಾರ ಸಂಜೆಯವರೆಗೂ ತಿಳಿಸದಿದ್ದಕ್ಕೆ ವಿನಿತಾ ಪೋಷಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ.. ಇಲ್ನೋಡಿ, ಪುಡಿ ರೌಡಿಗಳ ಹಾವಳಿ: ಪರಮೇಶ್ವರ್ ವಿರುದ್ಧ ಜೆಡಿಎಸ್ ಕಿಡಿ

SCROLL FOR NEXT