ಮುಂಬೈ-ಗೋವಾ ಹೆದ್ದಾರಿಯಲ್ಲಿ ರಾಯಗಢ ಜಿಲ್ಲೆಯಲ್ಲಿರುವ ಸಾವಿತ್ರಿ ನದಿಯಲ್ಲಿ ಪ್ರವಾಹಕ್ಕೆ ಕುಸಿದ ಮಹದ್-ಪೊಲದ್ಪುರ್ ಸೇತುವೆಯ ಉಳಿದ ಭಾಗದ ನೋಟ. 
ದೇಶ

ಮಹದ್ ಸೇತುವೆ ಕುಸಿತ: ಮುಳುಗಿದ ಬಸ್ಸುಗಳ ಅವಶೇಷ ಪತ್ತೆ

ಕಳೆದ ಎಂಟು ದಿನಗಳ ತೀವ್ರ ಹುಡುಕಾಟದ ನಂತರ ಮಹದ್ ನ ಸಾವಿತ್ರಿ ನದಿಯ ಸೇತುವೆ ಕುಸಿದು ಮುಳುಗಿ...

ಮುಂಬೈ: ಕಳೆದ ಎಂಟು ದಿನಗಳ ತೀವ್ರ ಹುಡುಕಾಟದ ನಂತರ ಮಹದ್ ನ ಸಾವಿತ್ರಿ ನದಿಯ ಸೇತುವೆ ಕುಸಿದು ಮುಳುಗಿ ಹೋಗಿದ್ದ ಬಸ್ಸುಗಳು ಅವಶೇಷಗಳು ಪತ್ತೆಯಾಗಿವೆ. ಸುದೀರ್ಘ ಹುಡುಕಾಟದ ನಂತರ ನೌಕಾಪಡೆ ತಂಡದವರು ಬಸ್ಸಿನ ಬಿಡಿಭಾಗಗಳನ್ನು ಪತ್ತೆಹಚ್ಚಿದ್ದಾರೆ.
ಸೇತುವೆ ಕುಸಿದ 170ರಿಂದ 200 ಮೀಟರ್ ದೂರದಲ್ಲಿ ಬಸ್ಸಿನ ಬಿಡಿ ಭಾಗಗಳು ಪತ್ತೆಯಾಗಿವೆ. ಪತ್ತೆಯಾದ ಬಸ್ಸಿನ ಭಾಗಗಳು ಒಂದು ಬಸ್ಸಿನದ್ದೇ ಅಥವಾ ಎರಡರದ್ದೇ ಎಂದು ತಿಳಿದುಬಂದಿಲ್ಲ.
ನದಿಯಲ್ಲಿ ಪರಿಸ್ಥಿತಿ ಕಠಿಣವಾಗಿದ್ದರೂ, ತೀವ್ರ ಅಲೆಯಿದ್ದರೂ, ಮೊಸಳೆಗಳಿದ್ದರೂ ಕೂಡ ನೌಕಾ ಪಡೆ ತಂಡ ಸ್ಪಾಟ್ ಡೈವಿಂಗ್ ನಡೆಸಿದೆ. 
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕ್ರೇನ್ ಬಳಸಿ ಭಗ್ನಾವಶೇಷಗಳ ಹುಡುಕಾಟ ನಡೆಸಿತು. ಈ ಸಂದರ್ಭದಲ್ಲಿ ಬಸ್ಸಿನ ಬಿಡಿ ಭಾಗಗಳು ಸಿಕ್ಕಿವೆ. ಡೈವಿಂಗ್ ನಲ್ಲಿ ವಿಶೇಷ ಪರಿಣತಿ ಪಡೆದ ಭಾರತೀಯ ನೌಕಾಪಡೆಯ ಸಿಬ್ಬಂದಿಗಳ ತಂಡ ಹುಡುಕಾಟದಲ್ಲಿ ನಿರತವಾಗಿದೆ. 
ಸೇತುವೆ ಕುಸಿತದಲ್ಲಿ ಕಣ್ಮರೆಯಾದವರ ಹುಡುಕಾಟ ನಡೆಸುವಂತೆ ಮಹಾರಾಷ್ಟ್ರ ಸರ್ಕಾರ ಭಾರತೀಯ ನೌಕಾಪಡೆಯನ್ನು ಕೋರಿತ್ತು. 
ಇದುವರೆಗೆ 26 ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದ್ದು, ಒಟ್ಟು 41 ಮಂದಿ ಕಣ್ಮರೆಯಾಗಿದ್ದಾರೆ. ದುರ್ಘಟನೆಯಲ್ಲಿ ಎರಡು ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಮತ್ತು ಎರಡು ಖಾಸಗಿ ಕಾರುಗಳು ಮತ್ತ 38 ಪ್ರಯಾಣಿಕರು ಸಾವಿತ್ರಿ ನದಿಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಪ್ರಕರಣದ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ; ಫಾರ್ಮ್‌ಹೌಸ್ ಪಕ್ಷಿ ವಿವಾದದಲ್ಲಿ ಕೋರ್ಟ್‌ನಿಂದ ಸಮನ್ಸ್ ಜಾರಿ

‘ಭಾರತ ನಡೆಯುವುದು ಸಂವಿಧಾನದಿಂದಲೇ ಹೊರತು ಬಹಿಷ್ಕಾರದಿಂದಲ್ಲ’: ಹಿಂದೂ-ಮುಸ್ಲಿಂ ಒಗ್ಗಟ್ಟಿಗೆ ಅಠಾವಳೆ ಕರೆ, ಗರ್ಬಾ ಉತ್ಸವದಲ್ಲಿ ಮುಸ್ಲಿಮರ ನಿಷೇಧಕ್ಕೆ ವಿರೋಧ..!

BSPಯಲ್ಲಿ ಮಹಾ ಬಿರುಕು: ಅಶೋಕ್ ಸಿದ್ಧಾರ್ಥ್ ನಿವೃತ್ತಿ ಬೆನ್ನಲ್ಲೇ ಸೋದರಳಿಯ ಆಕಾಶ್ ಆನಂದ್‌ನನ್ನು ಪಕ್ಷದ ಜವಾಬ್ದಾರಿಗಳಿಂದ ಕಿತ್ತೊಗೆದ ಮಾಯಾವತಿ..!

145 ಕಿಮೀ ವೇಗ... 6.5 ಅಡಿ ಎತ್ತರ! ‘ODI ವಿಶ್ವಕಪ್ ಹತ್ತಿರ ಬರುತ್ತಿದೆ, ಅವನಿಗೆ ಅವಕಾಶ ನೀಡಿ’: ಉದಯೋನ್ಮುಖ ವೇಗಿ ಪರ ಆಕಾಶ್ ಚೋಪ್ರಾ ಬ್ಯಾಟಿಂಗ್

‘BRICS‌ ನಿಂದ ಭಾರತಕ್ಕೇನು ಲಾಭ?’: ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರಶ್ನೆ, ತಿರುಗೇಟು ಕೊಟ್ಟ BJP