ದೇಶ

ನ್ಯಾಯಾಧೀಶರ ನೇಮಕ ತಡೆಹಿಡಿದು ತ್ವರಿತ ಇತ್ಯರ್ಥಕ್ಕೆ ಒತ್ತಡ ಹೇರಬೇಡಿ: ಕೇಂದ್ರಕ್ಕೆ ಸುಪ್ರೀಂ ತಪರಾಕಿ

Srinivas Rao BV

ನವದೆಹಲಿ: ನ್ಯಾಯಾಧೀಶರ ನೇಮಕದಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದಕ್ಕೆ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಾಧೀಶರನ್ನು ನೇಮಕ ಮಾಡದೆ ಬಾಕಿ ಇರುವ ಪ್ರಕರಣಗಳ ತೀರ್ಪನ್ನು ಶೀಘ್ರವೇ ನೀಡುವಂತೆ ಒತ್ತಡ ಹೇರಬೇಡಿ ಎಂದು ಸುಪ್ರೀಂ ಕೋರ್ಟ್ ನ ನ್ಯಾ. ಟಿಎಸ್ ಠಾಕೂರ್ ಅವರ ನೇತೃತ್ವದ ತ್ರಿಸದಸ್ಯ ಪೀಠ ಕೇಂದ್ರ ಸರ್ಕಾರಕ್ಕೆ ತಪರಾಕಿ ನೀಡಿದೆ.  ಫೆಬ್ರವರಿಯಿಂದ ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗೆ 75 ಜಡ್ಜ್ ಗಳನ್ನೂ ಶಿಫಾರಸ್ಸು ಮಾಡಲಾಗಿದ್ದರೂ ಈ ವರೆಗೂ ಒಂದೇ ಒಂದು ಹೆಸರನ್ನು ಅಂಗೀಕರಿಸಲಾಗಿಲ್ಲ. ಅಷ್ಟೇ ಅಲ್ಲದೆ, ಕೊಲಿಜಿಯಂ ನಿಂದ ವರ್ಗಾವಣೆ ಮಾಡಲಾಗಿರುವ ನ್ಯಾಯಾಧೀಶರನ್ನು ಸಹ ವರ್ಗಾವಣೆ ಮಾಡಲಾಗಿಲ್ಲ. ಇಂತಹ ಅಪನಂಬಿಕೆ ಏಕೆ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಜಡ್ಜ್ ಗಳ ನೇಮಕ ಹಾಗೂ ವರ್ಗಾವಣೆ ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಮೂರ್ತಿಗಳ ಸಮಿತಿ ನೇತೃತ್ವದ ಕೊಲಿಜಿಯಂ ನಿಂದಲೇ ನಡೆಯಲಿದ್ದು, ರಾಷ್ಟ್ರಪತಿಗಳಿಂದ ಅಂತಿಮ ಅನುಮೋದನೆಗಾಯಾಗಿ ಸರ್ಕಾರಕ್ಕೆ ಕಳಿಸಲಾಗುತ್ತದೆ. ನ್ಯಾಯಾಲಯಗಳೇ ಮುಚ್ಚಿಹೋಗುವ ಪರಿಸ್ಥಿತಿಯನ್ನು ನೀವು ನಿರ್ಮಿಸಲು ಸಾಧ್ಯವಿಲ್ಲ. ಜಡ್ಜ್ ಗಳ ನೇಮಕಾತಿ, ವರ್ಗಾವಣೆಗೆ ಸಂಬಂಧಿಸಿದ ಕಡತಗಳು ಎಲ್ಲಿವೆ ಎಂಬುದನ್ನು ಹೇಳಿ. ಸರ್ಕಾರಕ್ಕೆ ಒಂದಷ್ಟು ಹೊಣೆಗಾರಿಕೆ ಇರಬೇಕಾಗುತ್ತದೆ, ಒಂದು ವೇಳೆ ಏನಾದರೂ ಸಮಸ್ಯೆ ಇದ್ದಲ್ಲಿ ಅದನ್ನು ವಾಪಸ್ ಕಳಿಸಿ, ಆದರೆ ತಡೆ ಹಿಡಿಯಬೇಡಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಹೇಳಿದೆ. ಪ್ರಕ್ರಿಯೆಗಳ ಕಾರಣದಿಂದಾಗಿ ಸುಪ್ರೀಂ ಕೋರ್ಟ್ ಹಾಗು ಹೈಕೋರ್ಟ್ ಗಳ 400 ಕ್ಕೂ ಹೆಚ್ಚು ನ್ಯಾಯಾಧೀಶರ ನೇಮಕ ಸ್ಥಗಿತಗೊಂಡಿದೆ.

SCROLL FOR NEXT