ಖ್ಯಾತ ಸರೋದ್ ವಾದಕ ಅಮ್ಜದ್ ಅಲಿಖಾನ್ (ಸಂಗ್ರಹ ಚಿತ್ರ) 
ದೇಶ

ಸರೋದ್ ವಾದಕ ಅಮ್ಜದ್ ಅಲಿ ಖಾನ್ ಗೆ ಬ್ರಿಟನ್ ವೀಸಾ ನಿರಾಕರಣೆ

ವಿದೇಶಕ್ಕೆ ತೆರಳುವ ಭಾರತೀಯ ಗಣ್ಯರ ಅಪಮಾನ ಪ್ರಕರಣ ಮತ್ತೆ ಮುಂದುವರೆದಿದ್ದು, ಶಾರುಖ್ "ಖಾನ್" ಪ್ರಕರಣದ ಬೆನ್ನಲ್ಲೇ ಇದೀಗ ಖ್ಯಾತ ಸರೋದ್ ವಾದಕ ಅಮ್ಜದ್ ಅಲಿಖಾನ್ ಅವರಿಗೆ ಬ್ರಿಟನ್ ಸರ್ಕಾರ ವೀಸಾ ನಿರಾಕರಿಸಿರುವ ಅಂಶ ಬೆಳಕಿಗೆ ಬಂದಿದೆ.

ನವದೆಹಲಿ: ವಿದೇಶಕ್ಕೆ ತೆರಳುವ ಭಾರತೀಯ ಗಣ್ಯರ ಅಪಮಾನ ಪ್ರಕರಣ ಮತ್ತೆ ಮುಂದುವರೆದಿದ್ದು, ಶಾರುಖ್ "ಖಾನ್" ಪ್ರಕರಣದ ಬೆನ್ನಲ್ಲೇ ಇದೀಗ ಖ್ಯಾತ ಸರೋದ್ ವಾದಕ ಅಮ್ಜದ್  ಅಲಿಖಾನ್ ಅವರಿಗೆ ಬ್ರಿಟನ್ ಸರ್ಕಾರ ವೀಸಾ ನಿರಾಕರಿಸಿರುವ ಅಂಶ ಬೆಳಕಿಗೆ ಬಂದಿದೆ.

ಸ್ವತಃ ಅಮ್ಜದ್ ಅಲಿಖಾನ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಕಾರ್ಯಕ್ರಮ ನಿಮಿತ್ತ ಬ್ರಿಟನ್ ಗೆ ತೆರಳಲು ಇಚ್ಚಿಸಿ ತಾವು ಸಲ್ಲಿಸಿದ್ದ ವೀಸಾ ಅರ್ಜಿ ನಿರಾಕರಿಸಲಾಗಿದೆ. ಈ ಘಟನೆ ನಿಜಕ್ಕೂ  ನನ್ನಲ್ಲಿ ಆಘಾತವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಅಮ್ಜದ್ ಅಲಿಖಾನ್ ಅವರು, ನಿಜಕ್ಕೂ ಇದೊಂದು ನೋವಿನ ಸಂಗತಿಯಾಗಿದೆ. ಶಾಂತಿ ಮತ್ತು ಪ್ರೀತಿಯನ್ನು ಸಾರುವ ಓರ್ವ ಕಲಾವಿದನಿಗೆ ವೀಸಾ  ನಿರಾಕರಣೆ ಮಾಡಿರುವುದು ಸರಿಯಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಮೂಲಗಳ ಪ್ರಕಾರ ಮುಂಬರುವ ಸೆಪ್ಟೆಂಬರ್ 17ರಂದು ಲಂಡನ್ ನ ರಾಯಲ್ ಫೆಸ್ಟಿವಲ್ ಹಾಲ್ ನಲ್ಲಿ ಅಮ್ಜದ್ ಅಲಿಖಾನ್ ಅವರ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮ ನಿಮಿತ್ತ  ಅಮ್ಜದ್ ಅಲಿ ಖಾನ್ ಅವರು ವೀಸಾಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ವೀಸಾ ಅರ್ಜಿಯನ್ನು ಬ್ರಿಟನ್ ರಾಯಭಾರ ಕಚೇರಿ ನಿರಾಕರಿಸಿದೆ, 70ರ ದಶಕದಿಂದಲೂ ಅಮ್ಜದ್ ಅಲಿ ಖಾನ್ ಅವರು  ಲಂಡನ್ ಗೆ ಪ್ರಯಾಣ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಅವರಿಗೆ ವೀಸಾ ನಿರಾಕರಿಸಲಾಗಿದೆ.

ಇನ್ನು ಈ ಹಿಂದೆ ತಮ್ಮ ಹೆಸರಿನಲ್ಲಿ ಖಾನ್ ಎಂಬ ಪದವಿದೆ ಎಂಬ ಕಾರಣದಿಂದ ಬಾಲಿವುಡ್ ನಟ ಶಾರುಖ್ ಖಾನ್ ಅಮೆರಿಕ ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆಗೊಳಗಾಗಿದ್ದರು, ತೀವ್ರ  ವಿವಾದ ಹುಟ್ಟುಹಾಕಿದ್ದ ಈ ಪ್ರಕರಣ ಇಂದು ಅಮೆರಿಕ ರಾಯಭಾರಿ ಕ್ಷಮೆಯಾಚಿಸುವುದರೊಂದಿಗೆ ಮುಕ್ತಾಯಗೊಂಡಿತ್ತು. ಈ ಪ್ರಕರಣದ ಬೆನ್ನಲ್ಲೇ ಅಮ್ಜದ್ ಅಲಿಖಾನ್ ಅವರಿಗೆ ಬ್ರಿಟನ್ ವೀಸಾ  ನಿರಾಕರಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

Shocked & appalled. #UK visa rejected. scheduled to perform at the #RoyalFestivalHall in Sep @HCI_London @MEAIndia @SushmaSwaraj @UKinIndia

— Amjad Ali Khan (@AAKSarod) August 12, 2016

My UK visa rejected. Extremely sad for artists who are spreading the message of love & peace @HCI_London @MEAIndia @UKinIndia @SushmaSwaraj

— Amjad Ali Khan (@AAKSarod) August 12, 2016

Performing almost every year in #UK since the early 70s. Upset to have my visa rejected @HCI_London @MEAIndia @UKinIndia @SushmaSwaraj

— Amjad Ali Khan (@AAKSarod) August 12, 2016

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

SCROLL FOR NEXT