ಭಾರತದ ತ್ರಿವರ್ಣ ಧ್ವಜದೊಂದಿಗೆ ಪಾಕಿಸ್ತಾನದ ಜೆಎಫ್-17 ಯುದ್ಧ ವಿಮಾನದ ಚಿತ್ರವಿರುವ ಸಂಸ್ಕೃತಿ ಸಚಿವಾಲಯದ ಪ್ರಚಾರ ವಿಡಿಯೋ 
ದೇಶ

ಪಾಕ್ ಯುದ್ಧ ವಿಮಾನದ ಜೊತೆ ತ್ರಿವರ್ಣ ಚಿತ್ರವಿರುವ ವಿಡಿಯೋ ತೆಗೆದುಹಾಕಿದ ಸರ್ಕಾರ

ವೈಶಿಷ್ಟ್ಯಗೊಳಿಸಿದ ಜೆಟ್ ಪಾಕಿಸ್ತಾನದ ಯುದ್ಧ ವಿಮಾನ ಎಂದು ಟ್ವಿಟ್ಟರ್ ಬಳಕೆದಾರರು ಸೂಚಿಸಿದ್ದರಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ...

ನವದೆಹಲಿ: ವೈಶಿಷ್ಟ್ಯಗೊಳಿಸಿದ ಜೆಟ್ ಪಾಕಿಸ್ತಾನದ ಯುದ್ಧ ವಿಮಾನ ಎಂದು ಟ್ವಿಟ್ಟರ್ ಬಳಕೆದಾರರು ಸೂಚಿಸಿದ್ದರಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಂಸ್ಕೃತಿ ಸಚಿವಾಲಯ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋವನ್ನು ನಂತರ ತೆಗೆದುಹಾಕಿದೆ.
ಭಾರತ ದೇಶದ 70ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜೆಎಫ್-17 ಹಾರಾಟ ವಿಮಾನದಲ್ಲಿ ಭಾರತದ ಧ್ವಜವನ್ನು ಆನಿಮೇಷನ್ ಮಾಡಿ ಒಂದು ನಿಮಿಷಕ್ಕೂ ಅಧಿಕ ಸಮಯದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಸಂಸ್ಕೃತಿ ಸಚಿವಾಲಯ ಹಾಕಿತ್ತು. 
ಆದರೆ ನಂತರ ತನ್ನ ತಪ್ಪನ್ನು ತಿದ್ದಿಕೊಂಡಿರುವ ಸಚಿವಾಲಯ ವಿಡಿಯೋವನ್ನು ತೆಗೆದುಹಾಕಿದೆ. ಇದು ಆಕಸ್ಮಿಕವಾಗಿ ಆದ ತಪ್ಪಾಗಿದೆ. ಜೆಎಫ್-17 ಮತ್ತು ಭಾರತದ ತೇಜಸ್ ಹಗುರ ಯುದ್ಧ ವಿಮಾನ ನೋಡಲು ಒಂದೇ ತರ ಇದ್ದು, ಎರಡೂ ವಿಮಾನಗಳಲ್ಲಿನ ವ್ಯತ್ಯಾಸಗಳನ್ನು ಕಂಡುಹಿಡಿಯಲು ಸಾಮಾನ್ಯ ಪ್ರಜೆಗಳಿಗೆ ಕಷ್ಟವಾಗಬಹುದು. ಅದಾಗ್ಯೂ ತಪ್ಪಾಗಿದ್ದು ಗೊತ್ತಾದ ಮೇಲೆ ವಿಡಿಯೋವನ್ನು ತೆಗೆದುಹಾಕಿದ್ದೇವೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಜೆಎಫ್-17 ಜೆಟ್ ನ್ನು ಪಾಕಿಸ್ತಾನ ಮತ್ತು ಚೀನಾ ದೇಶಗಳು ಅಭಿವೃದ್ಧಿಪಡಿಸಿದ್ದು, ಜಾಗತಿಕ ಮಟ್ಟದಲ್ಲಿ ಸರಬರಾಜು ಬೇಡಿಕೆ ಸಿಗಲು ಎರಡೂ ರಾಷ್ಟ್ರಗಳು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿವೆ. ಜೆಫ್-17ನ್ನು ಖರೀದಿಸಲು ಮಾತುಕತೆ ನಡೆಸಿದ್ದ ಶ್ರೀಲಂಕಾ ಇದೀಗ ಅದನ್ನು ತಿರಸ್ಕರಿಸಿ ತೇಜಸ್ ನ್ನು ಕೊಳ್ಳುವ ಯೋಚನೆಯಲ್ಲಿದೆ. 
ಪಾಕಿಸ್ತಾನ ಇದನ್ನು ಪ್ರಮುಖ ಯುದ್ಧ ವಿಮಾನವನ್ನಾಗಿ ಮಾಡುವ ಉದ್ದೇಶ ಹೊಂದಿದೆ.
ಪ್ರಚಾರ ವಸ್ತುಗಳಲ್ಲಿ ವಿದೇಶಿ ಮಿಲಿಟರಿ ಉಪಕರಣಗಳನ್ನು ತಪ್ಪಾಗಿ ಚಿತ್ರಿಸುತ್ತಿರುವುದು ಭಾರತ ಮತ್ತು ಪಾಕಿಸ್ತಾನ ಅಧಿಕಾರಿಗಳಿಗೆ ಇದೇನು ಹೊಸತಲ್ಲ. ಮಾರ್ಚ್ 2011ರಲ್ಲಿ, ಅಮನ್ -11 ರಾಷ್ಟ್ರೀಯ ನೌಕಾ ಕಸರತ್ತಿನಲ್ಲಿ ಭಾರತೀಯ ನೌಕಾಪಡೆಯ ಚಿತ್ರಗಳನ್ನು ಪಾಕಿಸ್ತಾನ ನೌಕಾಪಡೆ ಚಿತ್ರಿಸಿ ಜಾಹೀರಾತು ಹೊರಡಿಸಿತ್ತು. ಆ ಜಾಹೀರಾತು ಎಲ್ಲಾ ಪಾಕಿಸ್ತಾನ ಪತ್ರಿಕೆಗಳಲ್ಲಿ ಪುಟ ತುಂಬಾ ಪ್ರಕಟಗೊಂಡಿತ್ತು. ಅದರಲ್ಲಿ ಭಾರತೀಯ ನೌಕಾಪಡೆಯ ದೆಹಲಿ, ಗೋದಾವರಿ ಮತ್ತು ತಲ್ವಾರ್ ದರ್ಜೆಯ ಯುದ್ಧ ನೌಕೆಗಳನ್ನು ಚಿತ್ರಿಸಲಾಗಿತ್ತು.
ಜನವರಿ 2010ರಲ್ಲಿ ಭಾರತ ಸರ್ಕಾರದ ಜಾಹೀರಾತೊಂದರಲ್ಲಿ ಪಾಕಿಸ್ತಾನದ ವಾಯುಪಡೆ ಮಾಜಿ ಮುಖ್ಯಸ್ಥ ಮಹಮೂದ್ ಅಹ್ಮದ್ ಅವರ ಫೋಟೋ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕ್ರಿಕೆಟರ್ ಕಪಿಲ್ ದೇವ್ ಅವರ ಫೋಟೋದೊಂದಿಗೆ ಪ್ರಕಟಗೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

SCROLL FOR NEXT