ದೆಹಲಿಯಲ್ಲಿ ಟ್ರಾಫಿಕ್ ಬದಲಾವಣೆ (ಸಾಂದರ್ಭಿಕ ಚಿತ್ರ) 
ದೇಶ

ಸ್ವತಂತ್ರ್ಯ ದಿನಾಚರಣೆ ರಕ್ಷಣೆ: ಮಾರ್ಗ ಬದಲಾವಣೆಯಿಂದಾಗಿ ದೆಹಲಿ ವ್ಯಕ್ತಿ ಸಾವು!

ಸ್ವತಂತ್ರ್ಯ ದಿನಾಚರಣೆ ನಿಮಿತ್ತ ದೆಹಲಿ ಪೊಲೀಸರು ಕೈಗೊಂಡಿದ್ದ ರಕ್ಷಣಾ ವ್ಯವಸ್ಥೆಯಿಂದಾಗಿ ದೆಹಲಿಯಲ್ಲಿ ಓರ್ವ ವ್ಯಕ್ತಿ ಬಲಿಯಾದ ವಿಚಿತ್ರ ಘಟನೆ ನಡೆದಿದೆ.

ನವದೆಹಲಿ: ಸ್ವತಂತ್ರ್ಯ ದಿನಾಚರಣೆ ನಿಮಿತ್ತ ದೆಹಲಿ ಪೊಲೀಸರು ಕೈಗೊಂಡಿದ್ದ ರಕ್ಷಣಾ ವ್ಯವಸ್ಥೆಯಿಂದಾಗಿ ದೆಹಲಿಯಲ್ಲಿ ಓರ್ವ ವ್ಯಕ್ತಿ ಬಲಿಯಾದ ವಿಚಿತ್ರ ಘಟನೆ ನಡೆದಿದೆ.

ಸ್ವತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದ್ದು, ಸ್ವತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯುವ ಪ್ರದೇಶದ ಸುತ್ತಮುತ್ತಲಿನ  ರಸ್ತೆಗಳನ್ನು ಮುಚ್ಚಲಾಗಿದೆ. ಈ ಹಿನ್ನಲೆಯಲ್ಲಿ ವಾಹನ ಸವಾರರು ಬದಲಿ ಮಾರ್ಗದ ಮೊರೆ ಹೋಗಿದ್ದು, ಕಿಮೀ ಗಟ್ಟಲೆ ಸುತ್ತಿ ಬಳಸಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಪೊಲೀಸರ ಈ  ಕ್ರಮದಿಂದಾಗಿ ದೆಹಲಿಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ.

ಮೂಲಗಳ ಪ್ರಕಾರ ದೆಹಲಿಯ ಗಾಂಧಿನಗರದ ನಿವಾಸಿಯಾದ ಸುಮಾರು 50 ವರ್ಷದ ಕೈಲಾಶ್ ಚಂದ್ರ ಎಂಬುವವರು ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯ  ಕುಟುಂಬಸ್ಥರು ಆರೋಪಿಸಿರುವಂತೆ ಸ್ವತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ದೆಹಲಿಯ ಪ್ರಮುಖ ರಸ್ತೆಗಳನ್ನು ಮುಚ್ಚಲಾಗಿದೆ. ಈ ಹಿನ್ನಲೆಯಲ್ಲಿ ಹೃದಯಾಘಾತಕ್ಕೀಡಾಗಿದ್ದ ಕೈಲಾಶ್ ಚಂದ್ರ  ಅವರನ್ನು ಬದಲಿ ಮಾರ್ಗದ ಮೂಲಕ ಆಸ್ಪತ್ರೆ ಸೇರಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.ಟ

ಶನಿವಾರ ಬೆಳಗ್ಗೆ ಸುಮಾರು 7.30ರಲ್ಲಿ ಕೈಲಾಶ್ ಚಂದ್ರ ಅವರಿಗೆ ಹೃದಯಾಘಾತವಾಗಿದ್ದು, ಗಾಂಧಿನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ಆಟೋ ರಿಕ್ಷಾದಲ್ಲಿ ಸಾಗಿಸಿದ್ದಾರೆ. ಸಾಮಾನ್ಯ  ದಿನಗಳಲ್ಲಿ ಈ ಆಸ್ಪತ್ರೆಗೆ ಬರಲು ಕೇವಲ 10 ನಿಮಿಷ ಸಮಯ ಸಾಕು. ಆದರೆ ಸ್ವತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಆಸ್ಪತ್ರೆ ಸಂಪರ್ಕಿಸುವ ರಸ್ತೆಗಳನ್ನು ಮುಚ್ಚಲಾಗಿದೆ. ಹೀಗಾಗಿ ಕೈಲಾಶ್  ಅವರನ್ನು ಆಸ್ಪತ್ರೆಗೆ ಸೇರಿಸಸು ಸಾಕಷ್ಟು ವಿಳಂಬವಾಗಿದೆ. ಮಾರ್ಗ ಮಧ್ಯೆ ಪೊಲೀಸರಲ್ಲಿ ನಾನು ಸಾಕಷ್ಟು ಮನವಿ ಮಾಡಿದ್ದೆ. ಆದರೆ ಪೊಲೀಸರು ನನಗೆ ದಾರಿ ಬಿಡಲಿಲ್ಲ. ಇದರಿಂದ ನನ್ನ ತಂದೆ   ಸಾವನ್ನಪ್ಪಿದ್ದಾರೆ ಎಂದು ಕೈಲಾಶ್ ಅವರ ಪುತ್ರ ಅರವಿಂದ್ ಕುಮಾರ್ ಹೇಳಿದ್ದಾರೆ.

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸರು ಕಾರ್ಯಕ್ರಮ ನಡೆಯುವ ರಸ್ತೆಯಲ್ಲಿ ಪೂರ್ವಾಭ್ಯಾಸ ನಡೆಯುತ್ತಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಈ ಮಾರ್ಗದಲ್ಲಿ ಯಾವುದೇ  ರೀತಿಯ ವಾಹನ ಚಲಾಯಿಸಲು ಅನುಮತಿ ಇರಲಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT