ದೇಶ

ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಬಲೂಚಿಸ್ತಾನದ ಪ್ರಸ್ತಾಪ: ಪ್ರಧಾನಿಯನ್ನು ಹೊಗಳಿದ ನ್ಯಾ.ಕಾಟ್ಜು

Srinivas Rao BV

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಬಲೂಚಿಸ್ತಾನದ ವಿಚಾರವನ್ನಿಟ್ಟುಕೊಂಡು ಪಾಕಿಸ್ತಾನವನ್ನು ತಿವಿದಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಶ್ಲಾಘಿಸಿದ್ದಾರೆ.

ಬಲೂಚಿಸ್ಥಾನದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಸ್ವಾಗತಿಸಿರುವ  ನ್ಯಾ.ಮಾರ್ಕಂಡೇಯ ಕಾಟ್ಜು, ಕಾಶ್ಮೀರದಲ್ಲಿ ನುಸುಳುಕೋರರನ್ನು ಉತ್ತೇಜಿಸುತ್ತಿರುವ, ಉಗ್ರವಾದವನ್ನು ಉತ್ತೇಜಿಸುತ್ತಿರುವ ಪಾಕಿಸ್ತಾನಕ್ಕೆ ನಮ್ಮ ಸರ್ಕಾರ ಪಾಕಿಸ್ತಾನದ ಭಾಷೆಯಲ್ಲೇ ಏಕೆ ಉತ್ತರ ನೀಡಬಾರದು ಎಂದು ಪ್ರಶ್ನಿಸಿದ್ದಾರೆ.

ಪಾಕಿಸ್ತಾನ ಕಾಶ್ಮೀರದಲ್ಲಿ ನಡೆಸುತ್ತಿರುವ ಚಟುವಟಿಕೆಗಳಿಗೆ, ನಾವು ಸಿಂಧ್, ಬಲೂಚಿಸ್ತಾನ, ಎನ್ ಡಬ್ಲ್ಯೂಎಫ್ ಪಿ ಗಳಲ್ಲಿ ಏಕೆ ಪಾಕಿಸ್ತಾನದ ಭಾಷೆಯಲ್ಲೇ ಉತ್ತರ ನೀಡಬಾರದು ಎಂದು ಮಾರ್ಕಂಡೇಯ ಕಾಟ್ಜು ಪ್ರಶ್ನಿಸಿದ್ದಾರೆ.  ಇದೇ ವೇಳೆ ಬಲೂಚಿಸ್ತಾನದ ಆಜಾದಿಗಾಗಿ ಧ್ವನಿ ಎತ್ತುವಂತೆ ಜೆಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕ ಕನ್ಹಯ್ಯ ಕುಮಾರ್ ಗೆ  ನ್ಯಾ.ಮಾರ್ಕಂಡೇಯ ಕಾಟ್ಜು ಸವಾಲು ಹಾಕಿದ್ದಾರೆ.

SCROLL FOR NEXT