ದೇಶ

ಆರು ಮಂದಿಯನ್ನು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡ 'ಕಿಲ್ಲರ್ ಡಾಕ್ಟರ್': ಫಾರ್ಮ್ ಹೌಸ್ ನಲ್ಲಿ ಮೃತದೇಹಗಳು ಪತ್ತೆ

Sumana Upadhyaya
ಸತಾರಾ(ಮಹಾರಾಷ್ಟ್ರ): ಆಘಾತಕಾರಿಯಾಗಿ ಬಹಿರಂಗಗೊಂಡಿರುವ ವಿಷಯವೊಂದರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಸಂತೋಷ್ ಪೊಲ್ ಎಂಬ ಡಾಕ್ಟರ್ ಆರು ಮಂದಿಯನ್ನು ಕೊಂದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಓವರ್ ಡೋಸ್ ಡ್ರಗ್ ನೀಡಿ ಸರಣಿ ಕೊಲೆಗೈದು ತನ್ನ ಫಾರ್ಮ್ ಹೌಸ್ ನಲ್ಲಿ ನಾಲ್ವರನ್ನು ಸುಟ್ಟು ಹಾಕಿ ಇಬ್ಬರನ್ನು ಮಣ್ಣು ಮಾಡಿದ್ದಾನೆ ಎಂದು ಮಹಾರಾಷ್ಟ್ರದ ವಾಯ್ ಪೊಲೀಸರಿಗೆ ತನಿಖೆ ವೇಳೆ ಗೊತ್ತಾಗಿದೆ. ಅವರಲ್ಲಿ ಐವರು ಮಹಿಳೆಯರು ಮತ್ತು ಒಬ್ಬ ಪುರುಷ ಡಾಕ್ಟರ್ ಕೈಲಿ ಹತರಾಗಿದ್ದಾರೆ.
ಐವರು ಸೇರಿ 6 ಜನ ಕೊಲೆ ಮೃತಪಟ್ಟವರಲ್ಲಿ ಕೆಲವರು 2003ರಿಂದಲೇ ಕಾಣೆಯಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮಂಗಲ್ ಜೆದೆ ಎಂಬವರ ಹತ್ಯೆಯೊಂದಿಗೆ 41 ವರ್ಷದ ವೈದ್ಯ ಸಂತೋಷ್ ನ ಸರಣಿ ಕೊಲೆ ಅಂತ್ಯಗೊಂಡಿದೆ. ಜೆದೆ ಸಂತೋಷ್ ಪೊಲ್ ಗೆ ಮಾಡಿದ ಕೊನೆಯ ಫೋನ್ ಕಾಲ್ ಪತ್ತೆಹಚ್ಚಿ ಪೊಲೀಸರು ಡಾಕ್ಟರ್ ನನ್ನು ಮೊನ್ನೆ 11ರಂದು ಬಂಧಿಸಿದ್ದರು. ದೇಹಕ್ಕೆ ಮಾರಕವಾದ ಡ್ರಗ್ಸ್ ನ ಓವರ್ ಡೋಸ್ ನೀಡಿ ಕೊಲೆ ಮಾಡಿರುವುದಾಗಿ ಕಿಲ್ಲರ್ ಡಾಕ್ಟರ್ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.
SCROLL FOR NEXT