ದೇಶ

ಪಾಕಿಸ್ತಾನಿ ಗೂಢಚಾರಿ ರಾಜಸ್ತಾನದಲ್ಲಿ ಬಂಧನ

Sumana Upadhyaya
ಜೈಸಲ್ಮರ್: ರಾಜಸ್ತಾನದ ಜೈಸಲ್ಮರ್ ನಲ್ಲಿ ಪಾಕಿಸ್ತಾನಿ ಗೂಢಚಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾರತಕ್ಕೆ 35 ಕೆಜಿ ಆರ್ ಡಿಎಕ್ಸ್ ಕಳ್ಳಸಾಗಣೆ ಮಾಡುವಲ್ಲಿ ತಾನು ಪ್ರಮುಖ ಪಾತ್ರ ವಹಿಸಿರುವುದಾಗಿ ಆತ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಭಾರತದ ಗುಪ್ತಚರ ಸಂಸ್ಥೆ ರಾ ನೀಡಿದ ಮಾಹಿತಿ ಆಧರಿಸಿ ನಂದಲ್ ಮಹರಾಜ್ ನನ್ನು ಬಂಧಿಸಿದ ಅಧಿಕಾರಿಗಳು ಆತನ ಬಳಿಯಿಂದ ಸೆಲ್ಯುಲರ್ ಫೋನನ್ನು ವಶಪಡಿಸಿಕೊಂಡಿದ್ದಾರೆ.
ವರದಿ ಪ್ರಕಾರ, ವೀಸಾ ಮತ್ತು ಪಾಸ್ ಪೋರ್ಟ್ ನೀಡಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ಹಿಂದೂ ಗೂಢಚಾರಿಯನ್ನು ಭಾರತಕ್ಕೆ ಕಳುಹಿಸಿದೆ. ಮಹಾರಾಜ ಕಳೆದ ಆರು ತಿಂಗಳಿನಿಂದ ಜೈಸಲ್ಮರ್ ನಲ್ಲಿ ವಾಸಿಸುತ್ತಿದ್ದ. ಆತ ಪಾಕಿಸ್ತಾನದಲ್ಲಿ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದು, ಉತ್ತಮ ಸ್ಥಿತಿವಂತನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT