ದುಬಾರಿ ಸೂಟ್ ನಲ್ಲಿ ಪ್ರಧಾನಿ ಮೋದಿ 
ದೇಶ

ಪ್ರಧಾನಿ ಮೋದಿಯವರ ‘ದುಬಾರಿ ಸೂಟ್’ ಗಿನ್ನೆಸ್ ದಾಖಲೆಗೆ ಸೇರ್ಪಡೆ

ಕಳೆದ ವರ್ಷ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ, ಬರೋಬ್ಬರಿ 4.31 ಕೋಟಿ...

ನವದೆಹಲಿ: ಕಳೆದ ವರ್ಷ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ, ಬರೋಬ್ಬರಿ 4.31 ಕೋಟಿ ರುಪಾಯಿಗೆ ಹರಾಜಾಗಿದ್ದ ವಿವಾದಿತ ‘ದುಬಾರಿ ಸೂಟ್’ಇದೀಗ   ಗಿನ್ನೆಸ್ ವಿಶ್ವದಾಖಲೆ ಪಟ್ಟಿಗೆ ಸೇರ್ಪಡೆಯಾಗಿದೆ.
'ನರೇಂದ್ರ ದಾಮೋದರದಾಸ್‌ ಮೋದಿ' ಎಂಬ ಹೆಸರನ್ನು ಚಿನ್ನದ ಬಣ್ಣದಲ್ಲಿ ಪಟ್ಟಿಯಂತೆ ಹೆಣೆಯಲಾಗಿರುವ ಮೋದಿಯವರ ಸೂಟ್ ಇದೀಗ ವಿಶ್ವದ ಅತ್ಯಂತ ದುಬಾರಿ ಸೂಟ್ ಆಗಿದ್ದು, ಗಿನ್ನೆಸ್ ದಾಖಲೆ ಮಾಡಿದೆ. 
10 ಲಕ್ಷ ರೂ. ಮೌಲ್ಯದ್ದು ಎನ್ನಲಾದ ಮೋದಿಯವರ ಸೂಟ್ ಅನ್ನು ಗುಜರಾತಿನ ಸೂರತ್​ನ ವಜ್ರದ ವ್ಯಾಪಾರಿ ಲಾಲಜಿಭಾಯಿ ತುಳಸಿಭಾಯಿ ಪಟೇಲ್ ಎಂಬುವರು ಹರಾಜಿನಲ್ಲಿ ಭಾಗವಹಿಸಿದ್ದ 47 ಜನರನ್ನು ಹಿಂದಿಕ್ಕಿ ಸೂಟ್​ನ್ನು 4, 31, 31,311 (ನಾಲ್ಕು ಕೋಟಿ ಮೂವತ್ತೊಂದು ಲಕ್ಷದ ಮೂವತ್ತೊಂದು ಸಾವಿರ ಮೂರು ನೂರ ಹನ್ನೊಂದು) ರುಪಾಯಿ ಮೌಲ್ಯಕ್ಕೆ ತಮ್ಮದಾಗಿಸಿಕೊಂಡಿದ್ದರು.
ಮೋದಿ ಈ ಸೂಟ್ ಧರಿಸಿದ ನಂತರ ಪ್ರತಿಪಕ್ಷಗಳಿಂದ ಸೂಟು ಬೂಟು ಸರ್ಕಾರ ಎಂಬ ಟೀಕೆಗೆ ಗುರಿಯಾಗಿದ್ದರು. ಅನಿವಾಸಿ ಭಾರತೀಯ ಉದ್ಯಮಿ ರಮೇಶ್ ವಿರಾಣಿ ಅವರು ಈ ಸೂಟನ್ನು ತಮ್ಮ ಮಗಳ ಮದುವೆ ಸಮಾರಂಭದ ವೇಳೆ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT