ಇಸಿಸ್ ಉಗ್ರ ಸಂಘಟನೆ (ಸಂಗ್ರಹ ಚಿತ್ರ) 
ದೇಶ

ಪತ್ನಿ, ಮಗಳೊಂದಿಗೆ ಇಸಿಸ್ ಸೇರಿದ ಮುಂಬೈ ಉದ್ಯಮಿ ಪುತ್ರ

ಕೇರಳದಲ್ಲಿ ನಾಪತ್ತೆಯಾಗಿದ್ದ ಯುವಕರು ಇಸಿಸ್ ಉಗ್ರರ ಸಂಘಟನೆಗೆ ಸೇರ್ಪಡೆ ಕುರಿತು ಶಂಕೆವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅಂತಹುದೇ ಮತ್ತೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮುಂಬೈ: ಕೇರಳದಲ್ಲಿ ನಾಪತ್ತೆಯಾಗಿದ್ದ ಯುವಕರು ಇಸಿಸ್ ಉಗ್ರರ ಸಂಘಟನೆಗೆ ಸೇರ್ಪಡೆ ಕುರಿತು ಶಂಕೆವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅಂತಹುದೇ ಮತ್ತೊಂದು ಘಟನೆ ಮಹಾರಾಷ್ಟ್ರದಲ್ಲಿ  ನಡೆದಿದೆ.

ಮುಂಬೈ ಮೂಲದ ಉದ್ಯಮಿಯೊಬ್ಬರ ಪುತ್ರ ತಮ್ಮ ಪತ್ನಿ, ಮಗಳು ಮತ್ತು ಸಹೋದರ ಸಂಬಂಧಿಯೊಂದಿಗೆ ಇಸಿಸ್ ಸೇರಿರುವುದಾಗಿ ತಮ್ಮ ಸಹೋದರನಿಗೆ ಸಂದೇಶ ರವಾನಿಸಿದ್ದಾರೆ.  ಸಂದೇಶದಲ್ಲಿ ನಾವು ಇಸಿಸ್ ಸಂಘಟನೆ ಸೇರಿದ್ದು, ಇನ್ನೆಂದೂ ಮನೆಗೆ ವಾಪಸ್ ಆಗುವುದಿಲ್ಲ. ಅಪ್ಪ ಮತ್ತು ಅಮ್ಮನನ್ನು ಜೋಪಾನವಾಗಿ ನೋಡಿಕೋ ಎಂದು ಅಶ್ಫಾಕ್ ತಮ್ಮ ಕಿರಿಯ  ಸಹೋದರನಿಂಗೆ ಸಂದೇಶ ಕಳುಹಿಸಿದ್ದಾರೆ. ಮೂಲಗಳ ಪ್ರಕಾರ ಉದ್ಯಮಿ ಅಬ್ದುಲ್ ಮಜೀದ್ ಅವರ ಪುತ್ರ ಅಶ್ಫಾಕ್ ಅಹಮದ್ ತನ್ನ ಪತ್ನಿ, ಮಗಳು ಮತ್ತು ಸಹೋದರ ಸಂಬಂಧಿಯೊಂದಿಗೆ  ಇಸಿಸ್ ಉಗ್ರ ಸಂಘಟನೆ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಕುಟುಂಬದ ಮೂಲಗಳು ತಿಳಿಸಿರುವಂತೆ, ಉದ್ಯಮಿ ಅಶ್ಫಾಕ್ ತಮ್ಮ ಪತ್ನಿ ಮಗಳು, ಹಾಗೂ ಇಬ್ಬರು ಸಹೋದರ ಸಂಬಂಧಿಗಳೊಂದಿಗೆ ಪಶ್ಚಿಮ ಏಷ್ಯಾ ಪ್ರವಾಸಕ್ಕೆ ತೆರಳಿದ್ದರು. ಕಳೆದು ಜೂನ್  2016ರಲ್ಲಿ ತಾವು ಇಸಿಸ್ ಸೇರಿರುವುದಾಗಿ ಅಶ್ಫಾಕ್ ತಮ್ಮ ಸಹೋದರನಿಗೆ ಎಸ್ ಎಂಎಸ್ ಸಂದೇಶ ರವಾನಿಸಿದ್ದಾರೆ. 26 ವರ್ಷದ ಅಶ್ಫಾಕ್ ರೊಂದಿಗೆ ಪತ್ನಿ ಮತ್ತು ಪುಟ್ಟ ಮಗಳು, ಆತನ  ಸಹೋದರ ಸಂಬಂಧಿಗಳಾದ ಮಹಮದ್ ಸಿರಾಜ್ ಹಾಗೂ ಇಜಾಜ್ ರೆಹಮಾನ್ ಇಸಿಸ್ ಉಗ್ರ ಸಂಘಟನೆ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಮಹಮದ್ ಸಿರಾಜ್ (22 ವರ್ಷ) ಕೂಡ ಉದ್ಯಮಿಯಾಗಿದ್ದು, ಇಜಾಜ್ ರೆಹಮಾನ್ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಅಶ್ಫಾಕ್ ತಂದೆ ಉದ್ಯಮಿ ಮಜೀದ್ ಅವರು ದೂರು ದಾಖಲಿಸಿದ್ದು, ದೂರಿನಲ್ಲಿ ಆಗಸ್ಟ್ 6 ರಂದು ಹನೀಫ, ಅಬ್ದುರ್ ರಷೀದ್ ಎಂಬ ಕೇರಳ ಮೂಲದ ಶಿಕ್ಷಕರು ತಮ್ಮ ಪುತ್ರ  ಅಶ್ಫಾಕ್ ರೊಂದಿಗೆ ಸಿರಿಯಾ ಪ್ರಯಾಣ ಮಾಡಿದ್ದು, ಸ್ಥಳೀಯ ನಿವಾಸಿ ಆರ್ಷಿ ಖುರೇಷಿ, ಕಲ್ಯಾಣ, ರಿಜ್ವಾನ್ ಖಾನ್ ಎಂಬುವವರು ಇಸಿಸ್ ಸೇರ್ಪಡೆಯಾಗಿದ್ದರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT